ನ್ಯೂಸ್ ನಾಟೌಟ್ : ಟೆಕ್ನಾಲಜಿ ಎಷ್ಟೇ ಮುಂದುವರಿದರೂ ಅದರೊಂದಿಗೆ ನಾವು ಮುಂದುವರಿದಿರಬೇಕಾಗುತ್ತದೆ. ಇಲ್ಲದೇ ಹೋದ್ರೆ ಎಷ್ಟೆಲ್ಲಾ ಅಪಾಯಗಳಾಗಬಹುದು ಅನ್ನೋದರ ಬಗ್ಗೆ ಈ ಹಿಂದೆಯೇ ಅನೇಕ ವರದಿಗಳನ್ನು ಓದಿದ್ದೇವೆ.ಸ್ವಲ್ಪ ಯಮಾರಿದ್ರೂ ಕೂಡ ನಮ್ಮಲ್ಲಿರುವ ಹಣವನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇಲ್ಲೊಂದೆಡೆ ಒಕೆ ಬಟನ್ ಒತ್ತದೇ ಬಂದಿರುವುದರ ಪರಿಣಾಮ ಏನಾಗಿದೆ ಎಂಬುದನ್ನು ನೋಡಿ..
ದಾವಣಗೆರೆಯ ವ್ಯಕ್ತಿಯೊಬ್ಬ ಹಣ ಡೆಪಾಸಿಟ್ ಮಿಷನ್ ನಿಂದ ನಗದು ದೋಚಿದ ಘಟನೆಯೊಂದು (Davanagere) ನಡೆದಿದೆ.ದಾವಣಗೆರೆ ಪಿ.ಬಿ.ರೋಡ್ ರಿಲಯನ್ಸ್ ಮಾರ್ಟ್ ಎದುರಿಗಿರುವ ಐಸಿಐಸಿಐ ಬ್ಯಾಂಕ್ಗೆ ವಿಜಯ್ ಎಂಬವರು 52 ಸಾವಿರ ಡೆಪಾಸಿಟ್ ಮಾಡಲು ಬಂದಿದ್ದರು. ಈ ವೇಳೆ ಡೆಪಾಸಿಟ್ ಮಿಷನ್ ಮೂಲಕ ಹಣ ಹಾಕುವಂತೆ ತನ್ನ ಸಹಾಯಕ ರಾಘವೇಂದ್ರನಿಗೆ ಹೇಳಿದ್ದರು.ಅವರಿಗೆ ಸಹಾಯ ಮಾಡಲೆಂದುವಿಜಯ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ರಾಘವೇಂದ್ರ ಅವರು ಮುಂದೆ ಬಂದಿದ್ದಾರೆ. ಈ ವೇಳೆ 52 ಸಾವಿರ ಹಣ ಡಿಪಾಸಿಟ್ ಮಾಡಿದ್ದರು.
ಮುಂದೆ ಡಿಪಾಸಿಟ್ ಮಿಷನ್ ನಲ್ಲಿ ಕೇಳಲಾದ ಎಲ್ಲಾ ಮಾಹಿತಿ ಭರ್ತಿ ಮಾಡಿದ ಬಳಿಕ ಡಿಪಾಸಿಟ್ ಬಟನ್ ಒತ್ತೋದನ್ನೇ ರಾಘವೇಂದ್ರ ಮರೆತು ಅಲ್ಲಿಂದ ಹೊರ ಬಂದಿದ್ದಾರೆ. ಹೀಗಾಗಿ ಮಿಷನ್ ನಲ್ಲೇ 52 ಸಾವಿರ ರೂಪಾಯಿ ಬಾಕಿಯಾಗಿತ್ತು. ಅದೇ ವೇಳೆಗೆ ಹಣ ಡ್ರಾ ಮಾಡಲು ಹೋದ ವ್ಯಕ್ತಿ ಕಣ್ಣಿಗೆ 52 ಸಾವಿರ ಹಣ ಇರೋದು ಕಂಡಿದೆ.ರೋಗಿ ಬಯಸಿದ್ದು ಹಾಲು ವೈದ್ಯ ಹೇಳಿದ್ದೇ ಹಾಲು ಎಂಬಂತೆ ಕೂಡಲೇ ಯಾರೂ ಇಲ್ಲದ್ದನ್ನ ನೋಡಿದ ವ್ಯಕ್ತಿ 52 ಸಾವಿರ ದೋಚಿ ಪರಾರಿಯಾಗಿದ್ದಾನೆ. ಅನಾಮಿಕ ವ್ಯಕ್ತಿ ಹಣ ತೆಗೆದುಕೊಳ್ಳುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಬಂಧ ಕೆಟಿಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ದೂರು ನೀಡಿ 15 ದಿನ ಕಳೆದರೂ ಪೊಲೀಸರು ಹಾಗೂ ಬ್ಯಾಂಕ್ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ ಎಂದು ವಿಜಯ್ ದೂರಿದ್ದಾರೆ.