ನ್ಯೂಸ್ ನಾಟೌಟ್ :ರಾಜಕೀಯ ಮುಖಂಡರೊಬ್ಬರ ಕಾರ್ಯಕ್ರಮದಲ್ಲಿ ಇಬ್ಬರು ದುಷ್ಕರ್ಮಿಗಳು ಬಾಂಬ್ ಎಸೆದು ಪರಾರಿಯಾಗಿರುವ ಭಯಾನಕ ಘಟನೆ ವರದಿಯಾಗಿದೆ.ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು,ಕೃತ್ಯ ಎಸಗಿದ ಇಬ್ಬರು ವ್ಯಕ್ತಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಡಿಎಂಕೆ ಪಕ್ಷದ ಕಾರ್ಯಾಧ್ಯಕ್ಷರೊಬ್ಬರು ಕುಟುಂಬ ಕಾರ್ಯಕ್ರಮ ಏರ್ಪಡಿಸಿದ್ದರು.ಈ ವೇಳೆ ಏಕಾಏಕಿ ಮೋಟಾರ್ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರ ನಲ್ಲತ್ತೂರಿನಲ್ಲಿ ಡಿಎಂಕೆ ಪದಾಧಿಕಾರಿಯೊಬ್ಬರು ಆಯೋಜಿಸಿದ್ದ ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಾಸಕರು ಜಿಲ್ಲಾ ಶಾಸಕ ಐಯಪ್ಪನ್ ಕೂಡ ಆಗಮಿಸಿದ್ದರು.
ಶಾಸಕ ಐಯಪ್ಪನ್ ಇತ್ತೀಚಿಗೆ ಅನಾರೋಗ್ಯದ ಕಾರಣದಿಂದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಆದರೆ ಈ ಕಾರ್ಯಕ್ರಮಕ್ಕೆ ಶಾಸಕರು ಬಂದಿರುವುದಾಗಿ ವರದಿಯಾಗಿದೆ.ಅದೃಷ್ಟವಶಾತ್ ಪೆಟ್ರೋಲ್ ಬಾಂಬ್ನಿಂದಾಗಿ ಯಾವುದೇ ಗಾಯಗಳು ವರದಿಯಾಗಿಲ್ಲ ವೆಂದು ತಿಳಿದು ಬಂದಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು. ಶಾಸಕರನ್ನು ಸುರಕ್ಷಿತವಾಗಿ ಪ್ರದೇಶದಿಂದ ಹೊರಕ್ಕೆ ಕರೆದೊಯ್ದಿದ್ದಾರೆ. ಅಲ್ಲದೇ ಈ ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.