ನ್ಯೂಸ್ ನಾಟೌಟ್: ಭಯೋತ್ಪಾದಕ ದಾಳಿ ಸಂದರ್ಭ ಮತ್ತು ಲವ್ ಜಿಹಾದನ್ನು ಎದುರಿಸಲು ವಿಶ್ವ ಹಿಂದೂ ಪರಿಷತ್ ನ ಅಂಗ ಸಂಸ್ಥೆ ದುರ್ಗಾ ವಾಹಿನಿ ಜಮ್ಮು ಕಾಶ್ಮೀರದ ಹೆಣ್ಣು ಮಕ್ಕಳಿಗೆ ರೈಫಲ್ ಮತ್ತು ಕತ್ತಿಗಳ ಬಳಕೆಯ ಬಗ್ಗೆ ‘ತರಬೇತಿ ಶಿಬಿರ‘ ನಡೆಸಿರುವುದಾಗಿ ಮೂಲಗಳು ತಿಳಿಸಿವೆ. ಈ ಶಿಬಿರದಲ್ಲಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಕಲೆಗಳನ್ನು ಕಲಿಸಿ ಕೊಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ ಎನ್ನಲಾಗಿದೆ.
ಜುಲೈ 3 ರಂದು ಆರಂಭವಾದ ಒಂದು ವಾರದ ಶಿಬಿರದಲ್ಲಿ ಕೇಂದ್ರಾಡಳಿತ ಪ್ರದೇಶದ 12 ಜಿಲ್ಲೆಗಳಿಂದ 18 ವರ್ಷ ವಯಸ್ಸಿನ ಹಲವು ಹೆಣ್ಣು ಮಕ್ಕಳು ಭಾಗವಹಿಸಿದ್ದರು. ಯೋಗ ಮತ್ತು ಆಯುಧರಹಿತ ತಂತ್ರಗಳ ಜೊತೆಗೆ, ಹೆಣ್ಣುಮಕ್ಕಳಿಗೆ ರೈಫಲ್ ಮತ್ತು ಕತ್ತಿಗಳ ಬಳಕೆಯ ಬಗ್ಗೆಯೂ ತರಬೇತಿ ನೀಡಲಾಗಿದೆ.
ರಕ್ಷಣಾ ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ, ಶಿಬಿರವು ಹುಡುಗಿಯರಿಗೆ ‘ಲವ್ ಜಿಹಾದ್’ ಬಗ್ಗೆ ಅರಿವು ಮೂಡಿಸಿದೆ ಎಂದು ವಿಎಚ್ಪಿ ಸದಸ್ಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.