ನ್ಯೂಸ್ ನಾಟೌಟ್ :ವಿಶ್ವ ಕಂಡ ಅತ್ಯುತ್ತಮ ಕ್ಯಾಪ್ಟನ್ ಅಂದ್ರೆ ಅದು ಧೋನಿ. ಇವರ ನಾಯಕತ್ವದಲ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ T20 ವಿಶ್ವಕಪ್, ODI ವಿಶ್ವಕಪ್ ಮತ್ತು ICC ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎಲ್ಲಾ ಮೂರು ಪ್ರಮುಖ ICC ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.ಇದೀಗ ಧೋನಿ ಫೇವರಿಟ್ ಕ್ರಿಕೆಟಿಗನೊಬ್ಬನ ಅಬ್ಬರ ಶುರುವಾಗಿದೆ.ಹೌದು, ಐಪಿಎಲ್ ನಲ್ಲಿ 2 ಶತಕ ಸಿಡಿಸಿದ 21 ವರ್ಷದ ಬ್ಯಾಟ್ಸ್ ಮನ್ ಈಗ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದು ಧೂಳೆಬ್ಬಿಸಲು ರೆಡಿಯಾಗಿದ್ದಾರೆ..!
ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತ ತಂಡ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ. ಟೆಸ್ಟ್ ಸರಣಿಯಲ್ಲೇ ಮೊದಲು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದ್ದು, ಇದಕ್ಕಾಗಿ ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಅದರಲ್ಲೂ ಚೊಚ್ಚಲ ಪಂದ್ಯಕ್ಕೂ ಮುನ್ನವೇ ದೊಡ್ಡ ಹೆಸರು ಗಳಿಸಿರುವ ಯುವ ಆಟಗಾರನೊಬ್ಬ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುವುದು ಬಹುತೇಕ ಖಚಿತವಾಗಿದೆ.
ಈ ಆಟಗಾರನಿಗೆ 3ನೇ ಸ್ಥಾನದಲ್ಲಿ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ತಂಡದ ಆರಂಭಿಕರಾಗಿರುವುದರಿಂದ ಜೈಸ್ವಾಲ್ ಗೆ ಓಪನಿಂಗ್ ಜವಾಬ್ದಾರಿ ಸಿಗುವುದು ತುಸು ಕಷ್ಟವೇ. ಟೀಂ ಇಂಡಿಯಾಗೆ ಆಯ್ಕೆಯಾಗುವ ಮುನ್ನ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಜೈಸ್ವಾಲ್ ಸಾಧನೆ ಅದ್ಭುತವಾಗಿದ್ದು, ಇತ್ತೀಚೆಗೆ, ಜೈಸ್ವಾಲ್ ಅವರು ಇರಾನಿ ಟ್ರೋಫಿ ಸಮಯದಲ್ಲಿ ಮಧ್ಯಪ್ರದೇಶ ವಿರುದ್ಧ ರೆಸ್ಟ್ ಆಫ್ ಇಂಡಿಯಾ ಪರ ಆಡುವಾಗ 213 ಮತ್ತು 144 ರ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದ್ದು ಗಮನಾರ್ಹ ವಿಚಾರ.