ನ್ಯೂಸ್ ನಾಟೌಟ್ : ದಲಿತ ವ್ಯಕ್ತಿಯೊಬ್ಬನ ಮೇಲೆ ಕುಡಿದ ಮತ್ತಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ವಿಡಿಯೋ ವೈರಲ್ ಆಗಿ ಆತನ ಮನೆ ಕೆಡವಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು. ಈಗ ಅಂತಹದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ದಲಿತ ವ್ಯಕ್ತಿಯೊಬ್ಬ ವಿದ್ಯುತ್ ವೈರಿಂಗ್ ಅನ್ನು ಪರಿಶೀಲಿಸಿದ್ದಕ್ಕಾಗಿ ಆತನ ಮೇಲೆ ಹಲ್ಲೆ ನಡೆಸಿ ಗುತ್ತಿಗೆ ಲೈನ್ ಮ್ಯಾನ್ ನ ಚಪ್ಪಲಿಗಳನ್ನು ನೆಕ್ಕಿಸಿದ ಘಟನೆ ಉತ್ತರ ಪ್ರದೇಶದ ಸೋನ್ ಭದ್ರಾ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಗುರುವಾರ ನಡೆದಿದ್ದು, ಶನಿವಾರದಂದು ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವೀಡಿಯೋ ಒಂದರಲ್ಲಿ, 21 ವರ್ಷದ ದಲಿತ ವ್ಯಕ್ತಿಯ ಮೇಲೆ ವಿದ್ಯುತ್ ಇಲಾಖೆಯ ಕಾರ್ಮಿಕರು ಅಮಾನುಷವಾಗಿ ಹಲ್ಲೆ ನಡೆಸಿ ಬಲವಂತವಾಗಿ ಚಪ್ಪಲಿಗಳನ್ನು ನೆಕ್ಕುವಂತೆ ಮಾಡಿದ್ದು ಮತ್ತು ದಲಿತ ವ್ಯಕ್ತಿ ಕಿವಿಗಳನ್ನು ಹಿಡಿದುಕೊಂಡು ಕ್ಷಮೆಯಾಚಿದ್ದಾನೆ.
ಸೋನ್ ಭದ್ರಾ ಜಿಲ್ಲೆಯ ಶಹಗಂಜ್ ಪ್ರದೇಶದಲ್ಲಿ ಗುತ್ತಿಗೆ ಲೈನ್ಮ್ಯಾನ್ ಆಗಿರುವ ತೇಜ್ಬಾಲಿ ಸಿಂಗ್ ಪಟೇಲ್ ಎಂದು ಗುರುತಿಸಲಾದ ಆರೋಪಿಯ ವಿರುದ್ಧ ಪೊಲೀಸರು ಶಹಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಆರೋಪಿಯನ್ನು ಬಂಧಿಸಲಾಗಿದೆ.