ನ್ಯೂಸ್ ನಾಟೌಟ್: ಮಡಿಕೇರಿಯ ನ್ಯಾಯಾಲಯದ ವಕೀಲರೊಬ್ಬರಿಗೆ ದುಷ್ಕರ್ಮಿಗಳಿಂದ ಬೆದರಿಕೆ ಪತ್ರವೊಂದು ಬಂದಿದ್ದು ಇದಕ್ಕೆ ವಕೀಲರ ಸಂಘದಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮಡಿಕೇರಿ ನ್ಯಾಯಾಲಯದ ವಕೀಲ ಕೃಷ್ಣಮೂತಿ೯ ಅವರಿಗೆ ಅಪರಿಚಿತ ವ್ಯೆಕ್ತಿಯಿಂದ ಬೆದರಿಕೆ ಪತ್ರ ಬಂದಿದೆ. ಈ ಪ್ರಕರಣವನ್ನು ಖಂಡಿಸಿರುವ ಮಡಿಕೇರಿ ವಕೀಲರ ಸಂಘವು ಕೂಡಲೇ ದುಷ್ಕಮಿ೯ಗಳನ್ನು ಬಂಧಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ. ಸದ್ಯ ಕೃಷ್ಣಮೂತಿ೯ ಅವರು ಮಡಿಕೇರಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಬೆದರಿಕೆ ಪತ್ರ ಬಂದಿರುವ ಪ್ರಕರಣದ ಬಗ್ಗೆ ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಅವರು ಆಡಳಿತ ಮಂಡಳಿ ಸಭೆಯಲ್ಲಿ ಚಚಿ೯ಸಿದ್ದಾರೆ.
ಮಾತ್ರವಲ್ಲ ಪ್ರಕರಣವನ್ನು ಖಂಡಿಸಿದ್ದಾರೆ. ಕೂಡಲೇ ಪೊಲೀಸರು ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ದುಷ್ಕಮಿ೯ಗಳನ್ನು ಬಂಧಿಸಬೇಕು ಎಂದೂ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಈ ಹಿಂದೆಯೂ ಕೃಷ್ಣಮೂತಿ೯ ಅವರ ಕಾರ್ ಮೇಲೆ ಚೆಟ್ಟಳ್ಳಿ ಬಳಿ ಗುಂಡಿನ ದಾಳಿ ನಡೆದಿತ್ತು. ಆ ಪ್ರಕರಣದ ಆರೋಪಿಗಳನ್ನೂ ಕೂಡ ಪೊಲೀಸರು ಇನ್ನೂ ಪತ್ತೆ ಹಚ್ಚಿಲ್ಲ. ಹೀಗಾಗಿ ನ್ಯಾಯವಾದಿ ಕೃಷ್ಣಮೂತಿ೯ ಅವರ ಮೇಲೆ ಪದೇ ಪದೇ ನಡೆಯುತ್ತಿರುವ ಬೆದರಿಕೆ, ದಾಳಿಗಳನ್ನು ಹತ್ತಿಕ್ಕಲು ಎರಡೂ ಪ್ರಕರಣಗಳ ಆರೋಪಿಗಳನ್ನು ಬಂಧಿಸುವಂತೆ ನಿರಂಜನ್ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.