ನ್ಯೂಸ್ ನಾಟೌಟ್ :ಇತ್ತೀಚೆಗೆ ಕಾಡಾನೆ (Elephant) ದಾಳಿಗೊಳಗಾಗಿ ಕೆಲವರು ಬಲಿಯಾಗಿದ್ದರೆ ಮತ್ತೂ ಕೆಲವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆಗಳು ನಡೆದಿದ್ದವು.ಇದರ ಬೆನ್ನಲ್ಲೇ ಕಾಡಾನೆಗಳ ಜತೆ ಸೆಲ್ಫಿ(selfi) ತೆಗೆಯಲು ಹೋಗಿ ಅವುಗಳು ದಾಳಿ ಮಾಡಲೆತ್ನಿಸಿದ ಘಟನೆ ವರದಿಯಾಗಿದೆ.ಘಟನೆಯಲ್ಲಿ ಮೂವರು ಕೂದಲೆಳೆ ಅಂತರದಲ್ಲಿ ಪಾರಾದ (Viralvideo)ವಿಡಿಯೋ ಭಾರಿ ವೈರಲ್ಲಾಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ(UttarPradesh) ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದ್ದು, ಆನೆಗಳ ಹಿಂಡು ರಸ್ತೆ ದಾಟುತ್ತಿದ್ದಾಗ ಮೂವರು ವ್ಯಕ್ತಿಗಳು ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಆನೆಗಳ ಹಿಂಡು ಈ ಮೂವರ ಮೇಲೆ ದಾಳಿಗೆ ಮುಂದಾಗಿದೆ.ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ವ್ಯಕ್ತಿಗಳು ಬದುಕಿದೆಯಾ ಬಡಜೀವವೇ ಎನ್ನುತ್ತಾ ಎದ್ನೋ ಬಿದ್ನೋ ಎಂದು ಓಡಿ ಜೀವ ಉಳಿಸಿಕೊಂಡಿದ್ದಾರೆ.ಮನುಷ್ಯ ಕಾಡು ಪ್ರಾಣಿಗಳೊಂದಿಗೆ ಎಚ್ಚರಿಕೆಯಿಂದಿರಬೇಕು ಎಂದು ಎಷ್ಟೇ ಗೋಳಾಡಿದ್ದರೂ ಕಡೆಗೂ ಆತಕಪಿ ಚೇಷ್ಟೆಗಳನ್ನು ಮಾಡುತ್ತಾ ಫಜೀತಿಗೆ ಸಿಲುಕುತ್ತಾನೆ.
ದೃಶ್ಯದಲ್ಲಿ ಕಾಡಾನೆಗಳ ಜತೆ ಇನ್ನೇನು ಸೆಲ್ಫಿ ತೆಗೆದುಕೊಳ್ಳಬೇಕು ಎಂದು ಭಂಡ ಧೈರ್ಯ ಮಾಡಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ್ದರು.ಈ ವೇಳೆ ಒಂದು ಆನೆ ಈ ಮೂವರನ್ನು ಅಟ್ಟಾಡಿಸಿಕೊಂಡು ಬಂದಿದೆ. ಮೂವರು ಜೀವ ಭಯದಲ್ಲಿ ಓಡಿ ಬರುತ್ತಿದ್ದಾಗಲೇ ಓರ್ವ ರಸ್ತೆಯಲ್ಲೇ ಬಿದ್ದಿದ್ದಾನೆ. ಈ ವೇಳೆ ಆತನ ಮೊಬೈಲ್ ರಸ್ತೆಗೆ ಬಿದ್ದಿದೆ ಜೀವ ಭಯದಲ್ಲಿದ್ದ ಯುವಕ ಮೊಬೈಲ್ (Mobile)ಅಲ್ಲೇ ಬಿಟ್ಟು ಎದ್ದು ಓಡಿ ಬಂದು ಜೀವ ಉಳಿಸಿಕೊಂಡಿದ್ದಾನೆ. ಕಾಡು ಪ್ರಾಣಿಗಳನ್ನು ದೂರದಲ್ಲೇ ನೋಡಿ ಖುಷಿ ಪಡಬೇಕು ವಿನಃ , ಈ ರೀತಿ ಮೊಂಡು ಧೈರ್ಯ ಮಾಡಿದ್ರೆ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.