ಕರಾವಳಿ

ಅರಂತೋಡು: ಸಂಭ್ರಮದ ಈದ್ ಮಿಲಾದ್ ಆಚರಣೆ, ಪ್ರತಿಭಾ ಪುರಸ್ಕಾರ

238
Spread the love

ಸುಳ್ಯ: ಅರಂತೋಡು ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ (ರಿ)ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ಜಂಟಿ ಅಶ್ರಯದಲ್ಲಿ ಪ್ರವಾದಿ  1496ನೇ ಜನ್ಮದಿನಾಚರಣೆ ಈದ್ ಮಿಲಾದ್ ಆಚರಣೆ ಸಂಭ್ರಮದಿಂದ ಅಚರಿಸಲಾಯಿತು. ವಿದ್ಯಾರ್ಥಿಗಳ ಇಸ್ಲಾಮಿಕ್ ಸಾಂಸ್ಕೃತಿಕ  ಕಾರ್ಯಕ್ರಮವು ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು.ಸುಬಹಿ ನಮಾಜಿನ ಬಳಿಕ ಮೌಲೀದ್ ಕಾರ್ಯಕ್ರಮ  ನಡೆಯಿತು.ಧ್ವಜಾರೋಹಣವನ್ನು ಜಮಾ ಅತ್ ಅಧ್ಯಕ್ಷ ಅಶ್ರಫ್ ಗುಂಡಿ ನೆರವೇರಿಸಿದರು .ಬಳಿಕ ನಡೆದ ಸಭಾ ಕಾರ್ಯಕ್ದ ಅಧ್ಯಕ್ಷತೆಯನ್ನು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ವಹಿಸಿದರು. ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ಕಾರ್ಯಕ್ರಮ ವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ  ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಟಿ.ಎಮ್.ಶಹೀದ್ ಮಾತನಾಡಿದರು. ಮದರಸ ವಿದ್ಯಾರ್ಥಿಗಳ ಕಲಿಕೆ ಮತ್ತು  ಹಾಜರಾತಿ ಯಲ್ಲಿ ಪ್ರಥಮ ಹಾಗೂ ದ್ವಿತೀಯ  ವಾರ್ಷಿಕ ಪರೀಕ್ಷೆಯಲ್ಲಿ ತೆರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು .ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ಫಮೀಝ ಅರಂತೋಡು ಮತ್ತು ಸುಳ್ಯ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಅರಂತೋಡು ಮದರಸ ವಿದ್ಯಾರ್ಥಿನಿ ಜುನೈದ ಇವರನ್ನು ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್ ಸನ್ಮಾನಿಸಿದರು.

ಮದರಸ ಅಧ್ಯಾಪಕರಾದ ಹನೀಫ್ ದಾರಿಮಿ ,ಸಾಜಿದ್ ಅಝ್ಹರಿ ಪೇರಡ್ಕ,ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯಶನ್ ಅಧ್ಯಕ್ಷ ಮಜೀದ್ ,ಸ್ವಲಾತ್ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್,ಅನ್ವಾರುಲ್ ಹುದಾ ಯಂಗ್ಮೆನ್ಸ್ ಎಸೋಸಿಯೆಶನ್ ಕಾರ್ಯದರ್ಶಿ ಫಸೀಲು,ನುಸ್ರತುಲ್ ಇಸ್ಲಾಂ ಮದರಸ ಮ್ಯಾನೇಜ್ ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ , ನಿವೃತ ಉಪನ್ಯಾಸಕ ಅಬ್ದುಲ್ಲಾ ಎ.ಎ, ಮಾಜಿ ಅಧ್ಯಕ್ಷರಾದ  ಹಾಜಿ ಕೆ.ಎಮ್.ಮಹಮ್ಮದ್ ,ಹಾಜಿ ಎಸ್ .ಇ.ಮಹಮ್ಮದ್ ,ಅಬ್ದುಲ್ ಖಾದರ್ ಪಟೇಲ್,  ಎಸ್.ಕೆ.ಎಸ್.ಎಸ್.ಎಫ್.ಅಧ್ಯಕ್ಷ ತಾಜುದ್ದೀನ್  ಅರಂತೋಡು, ಸೌದಿ  ಪ್ರತಿನಿಧಿ ಮಹಮ್ಮದ್ ಕಮಾಲ್,ಇಸಾಕುದ್ದೀನ್, ಜಾವೇದ್ ಪೇಲ್ತಡ್ಕ,ಉಸ್ಮಾನ್ ಕೆ.ಎಮ್, ದುಬೈ ಪ್ರತಿನಿಧಿ ಕೆ.ಎಮ್ .ಅನ್ವರ್,  ಸಿನಾನ್ ಕುನ್ನಿಲ್,ಎಸ್.ಕೆ.ಎಸ್.ಎಸ್.ಎಫ್ ಕಾರ್ಯದರ್ಶಿ ಜುಬೈರ್  ಮುಂತಾದವರು ಉಪಸ್ಥಿತರಿದ್ದರು. ಜಮಾ ಅತ್  ಕಾರ್ಯದರ್ಶಿ ಕೆ.ಎಮ್. ಮೂಸಾನ್ ಸ್ವಾಗತಿಸಿ ಮಜೀದ್ ವಂದಿಸಿದರು.

See also  ಭೀಕರ ಅಪಘಾತಕ್ಕೆ ತುತ್ತಾದ ಮದುವೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದ ಬಸ್, ಕಂಟೈನರ್ ಲಾರಿಗೆ ಗುದ್ದಿ ಪುಡಿಪುಡಿ
  Ad Widget   Ad Widget   Ad Widget