ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಪರವಾನಿಗೆ ರಹಿತವಾಗಿ ಚಲಿಸುತ್ತಿದ್ದ ಖಾಸಗಿ ಬಸ್ ಗಳಿಗೆ ಆರ್ ಟಿ ಓ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಅತಿ ಹಳೆಯದಾದ ಪರ್ಮಿಟ್ ಹೊಂದಿದ್ದ ಸುಳ್ಯ – ಮಂಡೆಕೋಲು ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ಸುಗಳನ್ನು ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಇಸ್ಮಾನ್ ನೇತೃತ್ವದಲ್ಲಿ ಸೀಝ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಈ ಬಗ್ಗೆ ಪುತ್ತೂರು ಆರ್ ಟಿ ಓ ಅಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ. ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿಯಲ್ಲಿ ಎರಡು ಬಸ್ಸುಗಳನ್ನು ಸೀಝ್ ಮಾಡಲಾಗಿದ್ದು, ಬಸ್ಸುಗಳು ಚೆನ್ನಕೇಶವ ದೇವಾಲಯದ ಬಳಿಯಲ್ಲಿನ ಪೋಲೀಸ್ ಸುಪರ್ದಿಗೆ ನೀಡಲಾಗಿದೆ.
ಅಜ್ಜಾವರ ಮಂಡೆಕೋಲು – ಅಡೂರುಗೆ ತೆರಳುತ್ತಿದ್ದ ಖಾಸಗಿ ಬಸ್ಸ್ ಒಂದು ಲಕ್ಷದ ಹನ್ನೆರಡು ಸಾವಿರ ಟ್ಯಾಕ್ಸ್ ಉಳಿಸಿಕೊಂಡಿದೆ. ಇನ್ನೊಂದು ಬಸ್ಸು ಸುಮಾರು ಮೂವತ್ತೊಂಬತ್ತು ಸಾವಿರ ಟ್ಯಾಕ್ಸ್ ಉಳಿಕೆ ಮಾಡಿಕೊಂಡಿದೆ.ಇವುಗಳಲ್ಲಿ ಒಂದು ಡಿಸೆಂಬರ್ ತಿಂಗಳಿನಲ್ಲಿ ಹಾಗೂ ಇನ್ನೊಂದು ಜನವರಿ ತಿಂಗಳಿನಲ್ಲಿ ಅವಧಿ ಮುಗಿದಿದ್ದರೂ ನವೀಕರಣ ಮಾಡದೇ ಬಸ್ಸುಗಳನ್ನು ಓಡಿಸುತ್ತಿರುವ ಕುರಿತು ಆರ್ ಟಿ ಓ ಅಧಿಕಾರಿಗಳಿಗೆ ದೂರು ಕೇಳಿಬಂದಿದೆ.
ಆರ್ ಟಿ ಓ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಬಸ್ಸಿನ ಚಾಲಕರು ಯಾರ ಬಸ್ಸು ಹಾಗೂ ಬಸ್ಸಿನ ಯಾವುದೇ ಪರವಾನಿಗೆ ಪತ್ರ ನೀಡದೇ ಇರುವ ಹಿನ್ನಲೆಯಲ್ಲಿ ಈ ಬಸ್ಸುಗಳನ್ನು ಸೀಝ್ ಮಾಡಲಾಗಿದೆ ಎಂದು ಅಧಿಕಾರಿಗಳಾದ ವಿಶ್ವನಾಥ್ ಅಜಿಲ ಹಾಗೂ ದೀಪಕ್ ರವರು ತಿಳಿಸಿದ್ದಾರೆ.ಈ ಕುರಿತಂತೆ ಕಾನೂನು ರೀತಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಹಾಗೂ ಪರವಾನಿಗೆ ಹೊಂದಿದ ಮಾಲಕರು ನೋಟಿಸ್ ಗೆ ಉತ್ತರ ಸಲ್ಲಿಸಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.