ನ್ಯೂಸ್ ನಾಟೌಟ್ : ಕಾಫಿ ನಾಡಲ್ಲಿ ಗಾಳಿ-ಮಳೆಯಬ್ಬರ ಮುಂದುವರಿದಿದೆ. ಧಾರಾಕಾರ ಮಳೆಯಿಂದಾಗಿ ಹಲವು ಕಡೆಗಳಲ್ಲಿ ನಾನಾ ಅನಾಹುತಗಳು ಸಂಭವಿಸುತ್ತಿದ್ದು,ವಿದ್ಯುತ್ ಕಂಬವೊಂದು ಧರೆಗುರುಳಿದ ಘಟನೆ ನಡೆದಿದೆ.
ಚಿಕ್ಕಮಂಗಳೂರು ಜಿಲ್ಲೆಯ ಕಳಸಾ ತಾಲೂಕಿನ ಹೊರನಾಡಿನಲ್ಲಿ ವಿದ್ಯುತ್ ಕಂಬ ಹಳ್ಳಕ್ಕೆ ಬಿದ್ದ ಪರಿಣಾಮ ಭಾರೀ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ.ಮತ್ತೊಂದೆಡೆ ಕಳಸ ತಾಲೂಕಿನ ಹಿರೇಬೈಲ್ ನ ಇಡಕಣೆ ಗ್ರಾಮದಲ್ಲಿ ಮನೆ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದೆ. ವಿಷಯ ತಿಳಿದು ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ಸಿಬ್ಬಂದಿಗಳು ಕಡಿತಗೊಳಿಸಿದ್ದಾರೆ. ಬಳಿಕ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆ ನಡೆಸಿದರು.
ಇತ್ತ ಮನೆ ಮೇಲೆ ಬಿದ್ದ ಬೃಹತ್ ಗಾತ್ರದ ಮರದಿಂದಾಗಿ ಅಡುಗೆ ಮನೆಯಲ್ಲಿದ್ದ ನಾಗರತ್ನಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಆದರೆ ಮನೆಯಲ್ಲಿದ್ದ ದಿನಸಿ ಪದಾರ್ಥ, ಪಾತ್ರೆಗಳು ನಜ್ಜು ಗುಜ್ಜಾಗಿವೆ ಎಂದು ತಿಳಿದು ಬಂದಿದೆ.