ನ್ಯೂಸ್ ನಾಟೌಟ್ :೧೯ ವರ್ಷದ ಯುವತಿಯನ್ನು ಅಪಹರಿಸಿ ಆಕೆ ಮೇಲೆ ಅತ್ಯಾಚಾರ ಮತ್ತು ಹತ್ಯೆ ಮಾಡಿದ ಆರೋಪ ಹೊತ್ತ ಯುವಕನ ಮನೆಯನ್ನು ಉತ್ತರ ಪ್ರದೇಶ ಪೊಲೀಸರು ಧ್ವಂಸಗೊಳಿಸಿದ್ದಾರೆ.ಜೂನ್ ೨೨ರಂದು ಈ ಅತ್ಯಾಚಾರ ಘಟನೆ ವರದಿಯಾಗಿತ್ತು.
ಆಕೆಯನ್ನು ಕಟ್ಟಡ ಮೇಲಿನಿಂದ ಕೆಳಕ್ಕೆ ತಳ್ಳಿದ ಪರಿಣಾಮ ಗಂಭೀರ ಗಾಯಗೊಂಡಿರುವ ಆಕೆ ಆಸ್ಪತ್ರೆಗೆ ದಾಖಲಾಗಿದ್ದು,ಎರಡು ದಿನಗಳ ಬಳಿಕ ಚಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿತ್ತು.ಈ ಬೆನ್ನಲ್ಲೇ ಆರೋಪಿ ಸಿಕಂದರ್ ಅಲಿಯಾಸ್ ಸೋನುವನ್ನು ಬಂಧಿಸಿ ಕಸ್ಟಡಿಗೆ ಕಳುಹಿಸಲಾಗಿದೆ.
ಫತೇಪುರ್ ಜಿಲ್ಲೆಯಲ್ಲಿ ಜೂನ್ 27 ರಂದು ಸೋನು ಮನೆ ಕೆಡವುವಿಕೆಯ ಮೊದಲ ಹಂತವನ್ನು ಅಧಿಕಾರಿಗಳು ಆರಂಭಿಸಿದ್ದರು.ಧ್ವಂಸ ಮಾಡುವಾಗ ಪೊಲೀಸರು ಮತ್ತು ನಾಗರಿಕ ಆಡಳಿತ ಅಧಿಕಾರಿಗಳು ಸ್ಥಳದಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ. ದೃಶ್ಯಾವಳಿಗಳಲ್ಲಿ ಬುಲ್ಡೋಜರ್ಗಳು ಆರೋಪಿಯ ಮನೆಯನ್ನು ಸಂಪೂರ್ಣವಾಗಿ ಕೆಡವಿರುವುದನ್ನು ಕಾಣಬಹುದು.
ವರದಿಗಳ ಪ್ರಕಾರ,ಜೂನ್ 22 ರಂದು 19 ವರ್ಷದ ಹುಡುಗಿ ತನ್ನ ಕುಟುಂಬದೊಂದಿಗೆ ತನ್ನ ಸೋದರ ಸಂಬಂಧಿಯ ಮದುವೆಗಾಗಿ ಬಿಂಡ್ಕಿ ಕೊಟ್ವಾಲಿಗೆ ಬರುತ್ತಿದ್ದರು.ಆರೋಪಿ ಮತ್ತು ಜ್ವಾಲಗಂಜ್ ನಿವಾಸಿ ಸಿಕಂದರ್ ಖಾನ್ ಅಲ್ಲಿಗೆ ಆಗಮಿಸಿ, ಬಾಲಕಿಯನ್ನು ಅಪಹರಿಸಿದ್ದ. ಬಳಿಕ 500 ಮೀಟರ್ ದೂರದಲ್ಲಿದ್ದ ಮನೆಗೆ ಕರೆದೊಯ್ದು,ಆಕೆಯ ಮೇಲೆ ಅತ್ಯಾಚಾರ ಎಸಗಿ ಮೇಲಿನಿಂದ ತಳ್ಳಿದ್ದಾನೆ ಎನ್ನಲಾಗಿದೆ.ಜೂನ್ 23 ರಂದು ಮುಂಜಾನೆ, ನಿರ್ಮಾಣ ಹಂತದಲ್ಲಿರುವ ಮನೆಯಲ್ಲಿ ಯುವತಿಯನ್ನು ಪತ್ತೆ ಮಾಡಲಾಯಿತು.ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದೆ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿ ಹೊರಬಿದ್ದಿತ್ತು.