ನ್ಯೂಸ್ ನಾಟೌಟ್: ನಾನು ಮೊದಲೆಲ್ಲ ಪತ್ರಿಕೆಯಲ್ಲಿ ಕ್ರೈಂ ಪುಟವನ್ನು ನೋಡುತ್ತಿರಲಿಲ್ಲ. ಆದರೆ ಈಗ ಪೊಲೀಸ್ ಇಲಾಖೆಗೆ ಸೇರಿದ ಬಳಿಕ ಪತ್ರಿಕೆಯಲ್ಲಿ ಮೊದಲು ಅಪರಾಧ ಪುಟಗಳನ್ನೇ ನೋಡಿ ಬಳಿಕ ಉಳಿದ ಸುದ್ದಿಗಳನ್ನು ಓದುವ ಸಂದರ್ಭ ಬಂದಿದೆ.ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಪಾದಕನಾಗಿ ದುಡಿದಿದ್ದೆ. ಆ ಕಾಲದಲ್ಲಿ ಪತ್ರಿಕೆಗಳಲ್ಲಿ ಬರುವ ಕಟ್ಟಿಂಗ್ ಗಳನ್ನು ಸಂಗ್ರಹಿಸುವ ಜವಾಬ್ದಾರಿ ನನ್ನದಾಗಿತ್ತುಎಂದು ಸುಳ್ಯ ಸಬ್ ಇನ್ಸ್ಪೆಕ್ಟರ್ ಈರಯ್ಯ ದೂಂತೂರು ಹೇಳಿದರು.
ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್( ರಿ ) ವತಿಯಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ದ. ಕ. , ಕೆ. ಜೆ. ಯು ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್ ಉದ್ಘಾಟಿಸಿದರು. ಶಿವಪ್ರಸಾದ್ ಅಲೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್. ಉಪನ್ಯಾಸ ನೀಡಿದರು.
ಈ ವೇಳೆ ಸುಳ್ಯ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಪತ್ರಿಕೆಯ ಪತ್ರಕರ್ತರು, ಮಾಧ್ಯಮ ಮಿತ್ರರು , ವಿದ್ಯಾರ್ಥಿಗಳು, ಜ್ಞಾನ ದೀಪ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.