ನ್ಯೂಸ್ ನಾಟೌಟ್: ಲಂಚ ತೆಗೆದುಕೊಂಡು ಸತಾಯಿಸುತ್ತಿದ್ದ ಗ್ರಾಮ ಲೆಕ್ಕಿಗನನ್ನು ಮಹಿಳೆಯೊಬ್ಬಳು ಸಾಕ್ಷಿ ಸಮೇತ ಹಿಡಿದಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಒಂದು ವರ್ಷದ ಹಿಂದೆ ಮಹಿಳೆಯೊಬ್ಬಳಿಂದ ಗ್ರಾಮ ಲೆಕ್ಕಿದ ಹಣ ಪಡೆದುಕೊಂಡಿದ್ದ. ಆದರೆ ಕೆಲಸ ಮಾತ್ರ ಮಾಡಿಯೇ ಕೊಟ್ಟಿಲ್ಲ. ಇದರಿಂದ ರೊಚ್ಚಿ ಗೆದ್ದ ಮಹಿಳೆ ಇದೀಗ ಸಾಕ್ಷಿ ಸಮೇತ ಗ್ರಾಮ ಲೆಕ್ಕಿಗನನ್ನು ಹಿಡಿದು ಹಾಕಿದ್ದಾಳೆ.
ಏನಿದು ಘಟನೆ?
ಗ್ರಾಮ ಲೆಕ್ಕಿಗನೊಬ್ಬ ಮಹಿಳೆಯಿಂದ ಗೂಗಲ್ ಪೇ ಮೂಲಕ 66 ಸಾವಿರ ರೂ. ಲಂಚ ಪಡೆದಿದ್ದಾನೆ. ಇದೀಗ ಗ್ರಾಮ ಲೆಕ್ಕಿಗ ನಿಂಗಪ್ಪ ಸುರಪುರನನ್ನು ಮಹಿಳೆ ಸಾಕ್ಷಿ ಸಮೇತ ಹಿಡಿದುಕೊಟ್ಟಿದ್ದಾಳೆ. ಜಂಟಿ ಖಾತೆ ಮಾಡಿಕೊಡಲು ಲಾಳನಕೆರೆ ಗ್ರಾಮದ ಮೀನಾಕ್ಷಿ ಎನ್ನುವ ಮಹಿಳೆ ಬಳಿ 66 ಸಾವಿರ ರೂ. ಲಂಚ ಪಡೆದಿದ್ದ. ಅದೂ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡಿದ್ದ. 66 ಸಾವಿರ ರೂ. ಲಂಚದ ಹಣವನ್ನು 5 ಕಂತುಗಳಲ್ಲಿ ಪಡೆದುಕೊಂಡಿದ್ದ. ಲಂಚ ಕೊಟ್ಟರೂ ಜಂಟಿ ಖಾತೆ ಮಾಡಿಕೊಡಲು 1 ವರ್ಷದಿಂದ ಕಚೇರಿಗೆ ಅಲೆಸಿದ್ದಾನೆ. ದುಡ್ಡು ಕೊಟ್ಟರು ಕೆಲಸ ಮಾಡಿಕೊಡದಿದ್ದರಿಂದ ಆಕ್ರೋಶಗೊಂಡ ಮಹಿಳೆ, ನಾಗಮಂಗಲ ತಹಶೀಲ್ದಾರ್, ಮಂಡ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾಳೆ. ಪೋನ್ ಪೇ ಮೂಲಕ ಲಂಚ ಪಡೆದಿರುವ ಬಗ್ಗೆ ಸಾಕ್ಷಿ ಸಮೇತವಾಗಿ ನಾಗಮಂಗಲ ತಹಶೀಲ್ದಾರ್, ಮಂಡ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಈ ಬಗ್ಗೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದೀಗ ಮಹಿಳೆಯ ದೂರಿನ ಮೇರೆಗೆ ಗ್ರಾಮ ಲೆಕ್ಕಿಗ ನಿಂಗಪ್ಪನಿಗೆ ನೋಟಿಸ್ ಜಾರಿ ಮಾಡಿಲಾಗಿದೆ. ಆದ್ರೆ, ಲೆಕ್ಕಿಗ ನಿಂಗಪ್ಪ ನೋಟಿಸ್ಗೆ ಉತ್ತರಿಸದೆ ನಾಪತ್ತೆಯಾಗಿದ್ದಾನೆ.