ನ್ಯೂಸ್ ನಾಟೌಟ್ : ಖ್ಯಾತ ನಟ ಮುಸ್ಲಿಮರ ಟೋಪಿ ಧರಿಸಿ ಒಂದೇ ಸಲಕ್ಕೆ ಲಕ್ಷಾಂತರ ಅಭಿಮಾನಿಗಳನ್ನು ಕಳೆದುಕೊಂಡಿರುವ ಘಟನೆ ಜೂನ್ 30ರಂದು ಬಕ್ರೀದ್ ಹಬ್ಬದಂದು ನಡೆದಿದೆ.
ನಟ ಹಾಗೂ ಸಸ್ಪೆಂಡ್ ಆಗಿದ್ದ ಐಎಎಸ್ ಆಫೀಸರ್ ಅಭಿಷೇಕ್ ಸಿಂಗ್ ಅವರು ಮುಸ್ಲಿಮರ ಟೋಪಿ ಧರಿಸಿ ಸರಿಸುಮಾರು 1 ಲಕ್ಷಕ್ಕೂ ಅಧಿಕ ಅಭಿಮಾನಿಗಳನ್ನು ಕಳೆದುಕೊಂಡಿದ್ದಾರೆ. ಸ್ವತಃ ನಟನೇ ಈ ವಿಚಾರವನ್ನು ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಬಕ್ರೀದ್ ಹಬ್ಬದ ಸಂದರ್ಭ ಅಭಿಷೇಕ್ ಅವರು ಸಾಂಪ್ರದಾಯಿಕ ಕೆಂಪು ಬಣ್ಣದ ಕುರ್ತಾ ಧರಿಸಿಕೊಂಡು ಬಿಳಿ ಬಣ್ಣದ ಕ್ಯಾಪ್ ಧರಿಸಿದ್ದರು. ಅವರು ಬಿಳಿ ಕ್ಯಾಪ್ ಧರಿಸಿದ ಕಾರಣ ಟ್ರೋಲ್ ಆಗಿದ್ದಾರೆ ವರದಿ ತಿಳಿಸಿದೆ.
ಬಕ್ರೀದ್ ಹಬ್ಬದ ಸಂದರ್ಭ ನಟ ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದಾರೆ. ಬಕ್ರ್ ಈದ್ ಮಾಡುವ ಬದಲು ರಖಮ್ ಈದ್ ಮಾಡೋಣ. ಇಲ್ಲಿ ಅವರು ಬಕ್ರೀದ್ ಸಂದರ್ಭ ಮಾಂಸದೂಟ ಮಾಡುವ ಬದಲು ಪ್ರಾರ್ಥನೆ ಮೂಲಕ ಆಚರಿಸೋಣ ಎಂದು ಹೇಳಿದ್ದಾರೆ. ನಟ ತಮ್ಮ ಪೋಸ್ಟ್ ಹಾಕಿದ ಕೆಲವು ಗಂಟೆಗಳ ನಂತರ ಕಾಮೆಂಟ್ ಮಾಡಿ, ನಾನು ಈ ಒಂದು ಪೋಸ್ಟ್ ನಿಂದಾಗಿ ಒಂದೇ ದಿನದಲ್ಲಿ ಸುಮಾರು 1 ಲಕ್ಷ ಫಾಲೋವರ್ಸ್ಗಳನ್ನು ಕಳೆದುಕೊಂಡಿದ್ದೇನೆ ಎಂದಿದ್ದಾರೆ.