ನ್ಯೂಸ್ ನಾಟೌಟ್ : ಗುಟ್ಟನ್ನು ರಟ್ಟಾಗಿ ಮಾಡೋದ್ರಲ್ಲಿ ಯಾರು ಫಸ್ಟ್ ? ಗಂಡಸರೋ?ಇಲ್ಲ ಹೆಂಗಸರೋ? ಇಂಥದ್ದೊಂದು ಪ್ರಶ್ನೆ ಕೇಳಿದ್ರೆ ಏನೂಂತ ಉತ್ತರ ಕೊಡ್ಬೇಕು ಹೇಳಿ? ಮಹಿಳೆಯರು ಸಾಧಾರಣವಾಗಿ ಗುಟ್ಟನ್ನು ಬಹುಬೇಗ ತಮ್ಮ ಪ್ರೀತಿಪಾತ್ರರಲ್ಲಿ ರಟ್ಟು ಮಾಡಿಬಿಡುತ್ತಾರೆ ಎಂದು ಹಲವರು ಹೇಳುವುದುಂಟು.ಯಾಕೆಂದರೆ ಹೆಂಗಸರ ಬಾಯಲ್ಲಿ ಗುಟ್ಟು ಉಳಿಯುವುದುಂಟೇ? ಎಂಬ ಗಾದೆಯೇ ಇರೋದ್ರಿಂದ ಹಲವರು ಹೇಳಿಯಾರು. ಆದರೂ, ಇಂಥದ್ದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ..
ಹಾಗಾದರೆ ಪುರುಷರು ಸೀಕ್ರೆಟ್ಗಳನ್ನು ಬಾಯಿ ಬಿಡುವುದೇ ಇಲ್ವ? ಹೀಗಂತ ಪ್ರಶ್ನೆ ಎತ್ತಿದ್ರೆ ಅದಕ್ಕು ಉತ್ತರವಿದೆ. ಹೌದು,ಅವರು ಕುಡಿದಾಗ ಸೀಕ್ರೆಟ್ಸ್ ಬಯಲು ಮಾಡುತ್ತಾರೆ ಎಂಬ ಮಾತು ಇದೆ. ಅದೊಂದು ಸಂದರ್ಭ ಬಿಟ್ಟರೆ ತಾನು ಹೇಳಬಾರದೆಂದು ಅಂದುಕೊಂಡ ವಿಚಾರಗಳ್ನು ಪುರುಷರು ಎಷ್ಟೇ ಕಷ್ಟ ಆದರೂ ಬಾಯಿ ಬಿಡುವುದಿಲ್ಲವಂತೆ. ಆದರೆ ಮಹಿಳೆಯರು ಹಾಗಲ್ಲ ‘ನಾನು ಹೇಳಿದೆ ಅಂತ ಹೇಳಬೇಡ’ವೆಂದು ಗುಟ್ಟಾಗಿರುವ ವಿಷಯಗಳನ್ನು ಹೇಳುವವರೇ ಅಧಿಕ ಮಂದಿ.
ಸಾಮಾನ್ಯವಾಗಿ ಮಹಿಳೆಯರು ತಮ್ಮ ಮನಸ್ಸಿಗೆ ನೋವಾದಾಗ, ಸೀಕ್ರೆಟನ್ನು ಬಯಲು ಮಾಡುತ್ತಾರಂತೆ. ಅದೂ ಅವರಿಗೆ ನೋವಾಗಿದ್ದು ಇನ್ನೊಂದು ಮಹಿಳೆಯಿಂದಲೇ ಆಗಿದ್ದರೆ ಅಲ್ಲಿಗೆ ಅವರ ಕಥೆ ಮುಗೀತು ಬಿಡಿ. ತನಗೆ ನೋವಾದ ಮಹಿಳೆಯ ಎಂತಹ ಖಾಸಗಿ ಸೀಕ್ರೆಟ್ಗಳು ತನಗೆ ಗೊತ್ತಿದ್ದರೂ, ಹೇಳದೆ ಇರೋದೆ ಇಲ್ಲವೆಂದು ಹೇಳಲಾಗುತ್ತದೆ.ಆದರೆ ಪುರುಷರು ಹೀಗೆ ಗುಟ್ಟನ್ನು ಗುಟ್ಟಾಗಿ ಇಡುವುದರಲ್ಲಿ ಎತ್ತಿದ ಕೈ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ಪುರುಷರು ತಮ್ಮ ಖಾಸಗಿ ವಲಯದಲ್ಲಿ ಮಾತಾಡಿಕೊಂಡ ಗುಟ್ಟನ್ನು ಅದನ್ನು ಅಲ್ಲೇ ಬಿಟ್ಟು ಬೇಗ ಮುನ್ನಡೆಯುತ್ತಾರಂತೆ.ಹಾಗಾದರೆ ಸಮೀಕ್ಷೆ ಏನು ಹೇಳುತ್ತೆ?
ಸಮೀಕ್ಷೆಗಳ ಪ್ರಕಾರ, ಮಹಿಳೆ ಗುಟ್ಟೊಂದನ್ನು ಕಡಿಮೆಯೆಂದರೆ 37 ನಿಮಿಷಗಳ ಕಾಲ, ಹೆಚ್ಚೆಂದರೆ 47 ಗಂಟೆಗಳ ಕಾಲ ಹಿಡಿದಿಡಬಲ್ಲಳು ಎಂದು ಹೇಳಲಾಗಿದೆ. ಏನೇ ಗುಟ್ಟು ಹೇಳಿದರೂ ಮಹಿಳೆಯ ಬಳಿ ಎರಡು ದಿನಕ್ಕಿಂದ ಹೆಚ್ಚು ಕಾಲ ಬಾಳಲಾರದು, ಅದು ರಟ್ಟಾಗುವುದು ಖಚಿತ ಎನ್ನುತ್ತದೆ ಈ ಸಮೀಕ್ಷೆ.
ಈ ಸಮೀಕ್ಷೆಯನ್ನು ಮಾಡಲು ಇಂಗ್ಲೆಂಡಿನಲ್ಲಿ ಮೂರು ಸಾವಿರ ಮಹಿಳೆಯರನ್ನು ಕರೆಸಲಾಯಿತು. ಅವರು 18ರಿಂದ 65ರ ವಯಸ್ಸಿನವರೆಗಿನವರಾಗಿದ್ದರು. ಅವರಿಗೆ ಗೊತ್ತಾದ ಸೀಕ್ರೆಟ್ ಎಷ್ಟೇ ಖಾಸಗಿಯಾಗಿರಲಿ, ಶೇಕಡಾ 45 ಮಂದಿ ಖಂಡಿತ ಆ ಗುಟ್ಟನ್ನು ಮತ್ತೊಬ್ಬರಿಗೆ ಹೇಳಿ ಹೃದಯ ಹಗುರ ಮಾಡಿಕೊಳ್ಳುತ್ತೇವೆ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ. ಇನ್ನೂ ಕೆಲವರು ತಮಗೆ ಗೊತ್ತಿರುವ ಸೀಕ್ರೆಟ್ಗಳನ್ನೆಲ್ಲಾ ಗಂಡ, ಬಾಯ್ಫ್ರೆಂಡ್, ಅಮ್ಮ ಅಥವಾ ಪರಮಾಪ್ತ ಗೆಳತಿಯ ಬಳಿ ಹೇಳುತ್ತೇವೆ ಎಂದಿದ್ದಾರೆ.ಬಹಳಷ್ಟು ಮಹಿಳೆಯರು ತಾವು ಕುಡಿದಾಗ ಹೇಳಿಬಿಡುತ್ತೇವೆ ಎಂದು ಹೇಳಿದ್ದಾರೆ.
ಆದರೆ ಹೆಚ್ಚಿನವರು ತಮ್ಮ ಬಳಿ ಇದನ್ನು ಯಾರಿಗೂ ಹೇಳಬೇಡ ಎಂದು ಹೇಳಿದ ವಿಶ್ವಾಸಾರ್ಹ ಗುಟ್ಟನ್ನು ಹಾಗೆಯೇ ಉಳಿಸಿಕೊಳ್ಳುತ್ತೇವೆ, ಯಾರಿಗೂ ಹೇಳುವುದಿಲ್ಲ ಎಂದು ಹೇಳಿದ್ದಾರೆ.ಇವರು ಹೇಳುವ ಪ್ರಕಾರ ಮಹಿಳೆಯರು ತಮಗೆ ಗೊತ್ತಿರುವ ಗುಟ್ಟುಗಳನ್ನುಅರ್ಧದಷ್ಟನ್ನು ಬೇರೊಬ್ಬರಿಗೆ ಹೇಳುವುದು ಕಡಿಮೆ ಎಂದಿದ್ದಾರೆ.ಅದರಲ್ಲಿ ಪೂರ್ತಿಯಾಗಿ ಹೇಳದೆ ಅರ್ಧದಷ್ಟು ಪೆಂಡಿಂಗ್ ಇಡುವವರೇ ಜಾಸ್ತಿ ಎನ್ನಲಾಗಿದೆ.ಯಾಕೆಂದರೆ, ಮಹಿಳೆ ಭಾವಜೀವಿ. ಕಾಳಜಿ ಆಕೆಯಲ್ಲಿ ಪುರುಷರಿಗಿಂತ ಹೆಚ್ಚು ಇರುತ್ತದೆ. ಆಕೆಯಲ್ಲಿ ಅಮ್ಮನಂತಹ ಗುಣ ಇರುವುದರಿಂದ ಹಾಗೂ ಅಮ್ಮನೂ ಆಗಿರುವುದಿಂದ ಸಾಕಷ್ಟು ವಿಚಾರಗಳು, ಸೂಕ್ಷ್ಮಗಳು ಅವಳಿಗೆ ಗೊತ್ತಿದ್ದರೂ ಸುಮ್ಮನಿರುತ್ತಾಳೆ ಎಂದಿದೆ.
ಸಮೀಕ್ಷೆಯ ಪ್ರಕಾರ ಮಹಿಳೆಗೆ ವಾರಕ್ಕೆ ಮೂರಾದರೂ ಗಾಸಿಪ್ ಸಿಗುತ್ತದೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಮಾತನಾಡುವುದರಿಂದ ಅವರಿಗೆ ಗಾಸಿಪ್ ಹೆಚ್ಚು ಸಿಗುತ್ತದೆ ಎಂದಿದೆ. ವಿಚಿತ್ರವೆಂದರೆ ಕೆಲವೇ ಮಂದಿ ಹೆಣ್ಣುಮಕ್ಕಳು ಮಾತ್ರ ತಮಗೆ ಗೊತ್ತಿರುವ ಸೀಕ್ರೆಟ್ಗಳು ಕೇಳಿಸಿಕೊಂಡು ಸ್ವಲ್ಪ ಹೊತ್ತಿನ ನಂತರ ನಮಗೆ ಮರೆತೇ ಹೋಗಿರುತ್ತದೆ ಎಂದೂ ಹೇಳಿದ್ದಾರೆ.