ನ್ಯೂಸ್ ನಾಟೌಟ್ : 40 ವರ್ಷವಾದ್ರೆ ಸಾಕು.ನನಗೆ ವಯಸ್ಸಾಯ್ತು ಎಂದು ಹೇಳುವವರೇ ಅಧಿಕ.ಆದರೆ ಇಲ್ಲೊಬ್ಬರು ಮಹಿಳೆ ತಮ್ಮ 58ನೇ ವಯಸ್ಸಲ್ಲಿ ಒಂದಲ್ಲ, ಅವಳಿ ಮಕ್ಕಳಿಗೆ ಜನ್ಮ ನೀಡಿ ಸುದ್ದಿಯಾಗಿದ್ದಾರೆ.
ಜೈಪುರದ ಬಿಕಾನೇರ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ಅವಳಿ ಗಂಡು-ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವ ಅಚ್ಚರಿಯ ಘಟನೆ ನಡೆದಿದೆ. ಹೆರಿಗೆಯ ನಂತರ ತಾಯಿ ಮತ್ತು ಮಕ್ಕಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವರದಿ ಪ್ರಕಾರ 58 ವರ್ಷದ ಶೇರಾ ಬಹದ್ದೂರ್ ಅವರಿಗೆ ಮಕ್ಕಳಿರಲಿಲ್ಲ. ಕೊನೆಗೆ ಐವಿಎಫ್ ತಂತ್ರದ ಮೊರೆ ಹೋಗಿದ್ದರು. ಇದೀಗ ಅದಾದ ಬಳಿಕ ಎರಡು ವರ್ಷಗಳ ಬಳಿಕ ಗರ್ಭಿಣಿಯಾಗಿದ್ದಾರೆ.ಈ ಬಗ್ಗೆ ತಾಯಿ ಫುಲ್ ಖುಷ್ ಆಗಿದ್ದಾರೆ.ಮಾತ್ರವಲ್ಲ ಅವರ ಕುಟುಂಬವೇ ಸಂತಸದಿಂದಿದೆ.
ಮಕ್ಕಳಾಗುವ ಭರವಸೆಯನ್ನು ಹೊತ್ತುಕೊಂಡು 58 ವರ್ಷದ ಶೇರಾ ಬಹದ್ದೂರ್ ಅವರಿಗೆ ಬಿಕಾನೇರ್ನ ಆಸ್ಪತ್ರೆಯಲ್ಲಿ ಮೊದಲು ವೈದ್ಯಕೀಯ ತಪಾಸಣೆ ನಡೆಸಿದ್ದರು. ಬಳಿಕ ಹಾರ್ಮೋನುಗಳನ್ನು ಸರಿಪಡಿಸಲು ಒಂದು ವರ್ಷದ ಚಿಕಿತ್ಸೆ ನೀಡಲಾಗಿದೆ. ನಂತರ ಐವಿಎಫ್ ಪ್ರಕ್ರಿಯೆ ಪ್ರಾರಂಭಿಸಿದ್ದು ಇದು ಯಶಸ್ವಿಯಾಗಿದೆ.ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು,ತಾಯಿಯಾಗುವ ಕನಸು ನನಸಾಗಿದೆ. ಶೇರಾ ಅವರ ವಯಸ್ಸು ಮತ್ತು ಇಚ್ಛಾಶಕ್ತಿ ಎಲ್ಲರಿಗೂ ಅಚ್ಚರಿ ತಂದಿದೆ ಎಂದು ಡಾ. ಶೆಫಾಲಿ ದಧಿಚ್ ಶೇರಾ ತಿಳಿಸಿದ್ದಾರೆ.