ನ್ಯೂಸ್ ನಾಟೌಟ್: ಏರ್ ಇಂಡಿಯಾ ವಿಮಾನದಲ್ಲಿ ವ್ಯಕ್ತಿಯೊಬ್ಬನ ಅನುಚಿತ ವರ್ತನೆಯಿಂದ ಜೈಲು ಪಾಲಾದ ಘಟನೆಯೊಂದು ಮಂಗಳವಾರ ವರದಿಯಾಗಿದೆ. ಮುಂಬೈ ಯಿಂದ ದೆಹಲಿಗೆ ಹಾರುತ್ತಿದ್ದ ವಿಮಾನದ ಸೀಟ್ ರೋ ನಲ್ಲಿ ಮಲ, ಮೂತ್ರ ವಿಸರ್ಜನೆ ಮತ್ತು ಉಗುಳಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಏರ್ ಇಂಡಿಯಾ (Air India) AIC 866 ವಿಮಾನ ಮುಂಬೈಯಿಂದ ದೆಹಲಿಗೆ ಜೂನ್ 24 ರಂದು ಹಾರುತ್ತಿತ್ತು. ವಿಮಾನ ಟೇಕ್ ಆಫ್ ಆದ ನಂತರ ಸೀಟ್ ನಂಬರ್ 17F ನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ವಿಮಾನದ ಸೀಟ್ ನ ಒಂಬತ್ತನೇ ಸಾಲಿನಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿ ಉಗುಳಿದ್ದು ತಿಳಿದುಬಂದಿದೆ.
ಇದರಿಂದಾಗಿ ವ್ಯಕ್ತಿಯ ಮೇಲೆ ಸಿಬ್ಬಂದಿ ಕ್ರಮ ಕೈಗೊಂಡಿದ್ದು ವರದಿಗಳ ಪ್ರಕಾರ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇನ್ನು ಮಾಹಿತಿಗಳ ಪ್ರಕಾರ ಕೃತ್ಯವೆಸಗಿದ ಪ್ರಯಾಣಿಕ ಆಫ್ರಿಕಾದಲ್ಲಿ ಅಡುಗೆ ಕೆಲಸದ ವೃತ್ತಿಯನ್ನು ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.