ನ್ಯೂಸ್ ನಾಟೌಟ್: ಹನಿಟ್ರ್ಯಾಪ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದೌರ್ಬಲ್ಯವನ್ನೇ ಗುರಿಯಾಗಿಸಿಕೊಂಡು ಮಾನವನ್ನು ಕತ್ತಲಲ್ಲಿ ತೆಗೆದು ವಿಡಿಯೋ ಚಿತ್ರೀಕರಿಸಿ ಬಳಿಕ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಹೀಗೆ ಮಾಡಲು ಹೋದ ಯುವತಿ ಅಂಡ್ ಗ್ಯಾಂಗ್ ಪೊಲೀಸರ ಅತಿಥಿಗಳಾಗಿದ್ದಾರೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಮಂಗಳೂರಿನ ಮೂಡುಶೆಡ್ಡೆ ರೆಸಾರ್ಟ್ ನಲ್ಲಿ ಯುವತಿಯ ಸಂಗಕ್ಕಾಗಿ ಇಬ್ಬರು ವ್ಯಕ್ತಿಗಳು ಬಂದಿದ್ದಾರೆ. ಹಾಗೆ ಬಂದವರು ಯುವತಿಯ ಜತೆಗೆ ರಾಸಲೀಲೆಯಲ್ಲಿ ತೊಡಗಿದ್ದಾಗ ಇದನ್ನು ವಿಡಿಯೋ ಮಾಡಿದ ಯುವತಿಯ ಕಡೆಯವರು ಇಬ್ಬರನ್ನು ಬ್ಲಾಕ್ ಮೇಲ್ ಮಾಡಿದ್ದಾರೆ. ಇಬ್ಬರು ಸಂತ್ರಸ್ತರಿಂದ 10 ಲಕ್ಷ ರೂ. ದೋಚಿದ್ದಾರೆ. ಸಂತ್ರಸ್ತರಿಬ್ಬರು ಕೂಡ ಕೇರಳ ಮೂಲದವರು ಎಂದು ತಿಳಿದು ಬಂದಿದೆ. ಸಂತ್ರಸ್ತರಿಗೆ ಕಿರುಕುಳ ಹೆಚ್ಚಾದ ಸಂದರ್ಭದಲ್ಲಿ ಈ ವಿಚಾರ ಪೊಲೀಸರ ಗಮನಕ್ಕೂ ಬಂದಿದೆ. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಏಳು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ಮಂಗಳೂರಿನಲ್ಲಿ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.