ನ್ಯೂಸ್ ನಾಟೌಟ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ದೆಹಲಿಯ ಕರೋಲ್ ಬಾಗ್ನಲ್ಲಿರುವ ಮೋಟಾರ್ಸೈಕಲ್ ಮೆಕ್ಯಾನಿಕ್ ಶಾಪ್ಗೆ ಭೇಟಿ ನೀಡಿ ಬಡವರ, ಕೂಲಿ ಕಾರ್ಮಿಕರ ಕಷ್ಟಗಳನ್ನು ನೇರ ವೀಕ್ಷಿಸಿ ಸಂವಾದ ನಡೆಸಲು ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಮಾಜಿ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಮೆಕಾನಿಕ್ ಶಾಪ್ಗೆ ಭೇಟಿ ನೀಡಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ಭೇಟಿ ವೇಳೆ ರಾಹುಲ್ ಗಾಂಧಿ ಗಾಂಧಿಯವರು ಮೆಕ್ಯಾನಿಕ್ಗಳ ಜೊತೆಯಲ್ಲಿ ಕುಳಿತು ಅವರೊಂದಿಗೆ ಸಂವಾದ ಮಾಡಿದ್ದಾರೆ
ಈ ಕೈಗಳು ಭಾರತವನ್ನು ರೂಪಿಸುತ್ತವೆ. ಈ ಬಟ್ಟೆಗಳ ಮೇಲೆ ಗ್ರೀಸ್ ನಮ್ಮ ಹೆಮ್ಮೆ ಮತ್ತು ಘನತೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ದೆಹಲಿಯ ಕರೋಲ್ ಬಾಗ್ನಲ್ಲಿ ಬೈಕ್ ಮೆಕ್ಯಾನಿಕ್ಗಳೊಂದಿಗೆ ಮಾತನಾಡಿ ‘ಭಾರತ್ ಜೋಡೋ ಯಾತ್ರೆ’ ಈ ಮೂಲಕ ಮುಂದುವರೆಯುತ್ತದೆ ಎಂದಿದ್ದಾರೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಈ ತಿಂಗಳ ಆರಂಭದಲ್ಲಿ ಅಮೆರಿಕಕ್ಕೆ ಆರು ದಿನಗಳ ಪ್ರವಾಸದ ಸಂದರ್ಭದಲ್ಲಿ, ಗಾಂಧಿ ವಾಷಿಂಗ್ಟನ್ ಡಿಸಿಯಿಂದ ನ್ಯೂಯಾರ್ಕ್ಗೆ ಪಂಜಾಬಿ ಟ್ರಕ್ ಡ್ರೈವರ್ನೊಂದಿಗೆ ಟ್ರಕ್ನಲ್ಲಿ ಸವಾರಿ ಮಾಡಿ ಸುದ್ದಿಯಾಗಿದ್ದರು.
ಒಂದು ತಿಂಗಳ ಹಿಂದೆ ಅವರು ಪಂಜಾಬಿ ಡ್ರೈವರ್ನೊಂದಿಗೆ ತಡರಾತ್ರಿ ಟ್ರಕ್ ಸವಾರಿ ಮಾಡಿದರು. ಡ್ರೈವರ್ಗಳ ಜೀವನ, ಅನುಭವಗಳು ಮತ್ತು ದೈನಂದಿನ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ದೆಹಲಿಯಿಂದ ಚಂಡೀಗಢಕ್ಕೆ ಅವರು ಪ್ರಯಾಣಿಸಿದ್ದೇನಿ ಎಂದಿದ್ದರು.