ನ್ಯೂಸ್ ನಾಟೌಟ್: ಅದೊಂದು ಕಾಲವಿತ್ತು ವೈದ್ಯರೆಂದರೆ ಜನ ದೇವರೆನ್ನುತ್ತಿದ್ದರು. ಆದರಿಂದು ಎಲ್ಲವೂ ಕಮರ್ಷಿಯಲ್ ಆಗಿ ಬಿಟ್ಟಿದೆ. ಹಣ ಪೀಕುವ ದಂಧೆಯೇ ಹೆಚ್ಚಿನ ಆಸ್ಪತ್ರೆಯಲ್ಲಿ ಕಾಣ ಸಿಗುತ್ತದೆ. ಹಾಗೆಯೇ ಇಲ್ಲೊಬ್ಬ ಬಾಲಕ ನಾಲಿಗೆ ಸರ್ಜರಿಗೆಂದು ಬಂದವನು ಇದೀಗ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡು ನೋವಿಗೆ ತುತ್ತಾದ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ವೈದ್ಯರ ಎಡವಟ್ಟಿಗೆ ಇಂತಹದ್ದೊಂದು ದುರ್ಘಟನೆ ಸಂಭವಿಸಿದೆ. ಆಸ್ಪತ್ರೆಯ ಲೈಸನ್ಸ್ ಅನ್ನೇ ರದ್ದುಗೊಳಿಸಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಎರಡೂವರೇ ವರ್ಷದ ಬಾಲಕ ಮಾತನಾಡುವಾಗ ತೊದಲುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನಿಗೆ ಉತ್ತರ ಪ್ರದೇಶದ ಬರೇಲಿಯ ಎಂ ಖಾನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಗೆಂದು ದಾಖಲಿಸಲಾಗಿತ್ತು. ಶುಕ್ರವಾರ ಬಾಲಕನ ಶಸ್ತ್ರಚಿಕಿತ್ಸೆ ನಡೆದಿತ್ತು. ವೈದ್ಯರು ನಾಲಿಗೆಯ ಬದಲು ಜನನಾಂಗದ ಮುಂಭಾಗವನ್ನು ಕತ್ತರಿಸಿದ್ದರು. ಶಸ್ತ್ರಚಿಕಿತ್ಸೆಗೆ ಅನುಮತಿ ಪಡೆಯುವ ದಾಖಲೆಗಳು ಇಂಗ್ಲಿಷ್ ನಲ್ಲಿದ್ದುದರಿಂದ ನಮಗೆ ಏನೂ ಗೊತ್ತಾಗಲಿಲ್ಲ ಎಂದು ಪೋಷಕರು ಹೇಳಿದ್ದಾರೆ.
ಸದ್ಯ ಮೇಲ್ನೋಟಕ್ಕೆ ಆಸ್ಪತ್ರೆಯ ವೈದ್ಯರ ಎಡವಟ್ಟು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯನ್ನು ಲೈಸನ್ಸ್ ಅನ್ನು ಅಮಾನತಿನಲ್ಲಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪ ಸಾಬೀತಾದರೆ ಆಸ್ಪತ್ರೆಯ ವಿರುದ್ಧ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.