ನ್ಯೂಸ್ ನಾಟೌಟ್ : ಹಲವು ತಿಂಗಳುಗಳಿಂದ ಕೃಷಿ ಭೂಮಿ ಮೇಲೆ ದಾಳಿ ಮಾಡುತ್ತಿದ್ದ ಹಾಗೂ ಬೆಳೆಗಳನ್ನು ನಾಶ ಪಡಿಸುತ್ತಿದ್ದ ಕಾಡಾನೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಸಮೀಪದ ಕಂಡಂಗಾಲ ಗ್ರಾಮದ ಬಳಿ 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು.ಈ ಆನೆಯು ಕಳೆದ ಹಲವು ತಿಂಗಳುಗಳಿಂದ ಈ ಭಾಗದಲ್ಲಿ ಕೃಷಿ ಭೂಮಿಯ ಮೇಲೆ ದಾಳಿ ನಡೆಸಿ, ಬೆಳೆಗಳನ್ನು ನಾಶಪಡಿಸಿತ್ತು.
ಇದರ ಸೆರೆಗೆ ಭಾನುವಾರ ಬೆಳಿಗ್ಗೆಯಿಂದಲೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಯನ್ನು ಸೆರೆ ಹಿಡಿಯಲು ಹರಸಾಹಸ ಪಟ್ಟರು. ಅಭಿಮನ್ಯು, ಪ್ರಶಾಂತ, ಹರ್ಷ ಸೇರಿದಂತೆ 4 ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಸಲಾಯಿತು. ಮಧ್ಯಾಹ್ನದ ವೇಳೆಗೆ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಸೆರೆ ಹಿಡಿಯಲಾಯಿತು.