ನ್ಯೂಸ್ ನಾಟೌಟ್ : 1,200 ಕ್ಕೂ ಹೆಚ್ಚು ಜನರಿದ್ದ ಮಹಿಳೆಯರ ನೇತೃತ್ವದ ಗುಂಪು ಸುತ್ತುವರಿದ ನಂತರ ಭಾರತೀಯ ಸೇನೆ ಇಂದು ಒಂದು ಡಜನ್ ಉಗ್ರರನ್ನು ಬಿಡುಗಡೆ ಮಾಡಿದ ಘಟನೆ ಮಣಿಪುರದ ಇಥಾಮ್ ಗ್ರಾಮದಲ್ಲಿ ನಡೆದಿದೆ. ನಾಗರಿಕರ ಪ್ರಾಣಕ್ಕೆ ಅಪಾಯವನ್ನುಂಟು ಮಾಡದಿರಲು ನಿರ್ಧರಿಸಿದ ಕಾರಣ ಉಗ್ರರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಕೆವೈಕೆಎಲ್ (ಕಂಗ್ಲೀ ಯಾವೋಲ್ ಕನ್ನ ಲುಪ್) ಬಂಡುಕೋರ ಗುಂಪಿನ 12 ಬಂಧಿತ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗಿದೆ.
“ಮಹಿಳೆಯರು ಮತ್ತು ಸ್ಥಳೀಯ ನಾಯಕರ ನೇತೃತ್ವದಲ್ಲಿ ಸುಮಾರು 1200-1500 ಜನರನ್ನು ಒಳಗೊಂಡ ಜನಸಮೂಹವು ಬಂಧಿಸಿದ್ದ ಸೇನಾ ಪ್ರದೇಶವನ್ನು ಸುತ್ತುವರಿಯಿತು. ಅಂತಹ ಕ್ರಮದಿಂದ ಸಂಭವನೀಯ ಸಾವು ನೋವುಗಳನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ 12 ಕಾರ್ಯಕರ್ತರನ್ನು ಸ್ಥಳೀಯ ನಾಯಕನಿಗೆ ಹಸ್ತಾಂತರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಸೇನೆ ಹೇಳಿಕೊಂಡಿದೆ.
“ಭಾರತೀಯ ಸೇನೆಯ ಮಾನವೀಯ ಮುಖವನ್ನು ತೋರಿಸುವ ‘ಪ್ರಬುದ್ಧ ನಿರ್ಧಾರ’ ತೆಗೆದು ಕೊಂಡಿದ್ದಕ್ಕಾಗಿ ಕಾರ್ಯಾಚರಣೆಯ ಉಸ್ತುವಾರಿ ಕಮಾಂಡರ್ ಅವರನ್ನು ಸೇನೆಯು ಶ್ಲಾಘಿಸಿದೆ.
ಸೇನೆಯು ಒಬ್ಬ ಮುಖ್ಯಸ್ಥನನ್ನು ಗುರುತಿಸಿದ್ದು, ಅವರು 6 ಡೋಗ್ರಾ (6 ನೇ ಡೋಗ್ರಾ ರೆಜಿಮೆಂಟ್) ಒಳಗೊಂಡ 2015 ರ ಹೊಂಚುದಾಳಿ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದರು ಎನ್ನಲಾಗಿದೆ. ಸೇನೆಯು ಇದಕ್ಕೆ ಸಂಬಂಧ ಪಟ್ಟ ಕಾರ್ಯಾಚರಣೆ ಮುಂದುವರಿಸಿದೆ ಜೊತೆಗೆ ಘಟನೆಯ ಉಪಗ್ರಹ ಚಿತ್ರ ಮತ್ತು ವಿಡಿಯೋಗಳನ್ನು ಬಿಡುಗಡೆಗಳಿಸಿದೆ.