ನ್ಯೂಸ್ ನಾಟೌಟ್ : ಮಾಜಿ ಮುಖ್ಯಮಂತ್ರಿಯೊಬ್ಬರ ಮಗಳು ಭಾರಿ ಸುದ್ದಿಯಲ್ಲಿದ್ದಾಳೆ. ಸದ್ಯ ಆಕೆ ನಾನು ಅವನಲ್ಲ ಅವಳು ಎನ್ನುತ್ತಿದ್ದಾಳೆ. ಇದು ಭಾರಿ ಚರ್ಚೆಗೆ ಕಾರಣವಾಗಿದೆ.
ಅಂದ ಹಾಗೆ ಪಶ್ಚಿಮ ಬಂಗಾಳದ (West Bengal) ಮಾಜಿ ಸಿಎಂ ಬುದ್ಧದೇಬ್ ಭಟ್ಟಾಚಾರ್ಯ (Fromer CM Buddhadeb Bhattacharya) ಅವರ ‘ಪುತ್ರಿ’ ತಮ್ಮ ‘ಲಿಂಗ’ ಬದಲಿಸಿ ‘ಪುತ್ರ’ರಾಗಲು ಮಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ಹೌದು ಸುಚೇತನಾ ಭಟ್ಟಾಚಾರ್ಯ (Suchetana Bhattacharya) ಅವರು ಈ ನಿರ್ಧಾರ ಕೈಗೊಂಡಿದ್ದು,ಈ ಬಗ್ಗೆ ಅವರು ಮಾಧ್ಯಮವೊಂದರಲ್ಲಿ ಮಾತನಾಡಿದ್ದಾರೆ. ಪುರುಷನಾಗಲು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಯೋಜಿಸುತ್ತಿರುವುದಾಗಿ ವರದಿಯಾಗಿದೆ. ಸುಚೇತನಾ ಅವರು ಇತ್ತೀಚೆಗಷ್ಟೇ ಎಲ್ಜಿಬಿಟಿಕ್ಯೂ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರು ತಮ್ಮನ್ನು ತಾವು ಪುರುಷನೆಂದು ಗುರುತಿಸಿಕೊಂಡಿದ್ದರು. ಅವರು ದೈಹಿಕವಾಗಿಯೂ ಲಿಂಗ ಬದಲಿಸಿಕೊಳ್ಳಲು ಮುಂದಾಗಿರುವುದಾಗಿ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ.ಸುಚೇತನಾ ಬದಲಿಗೆ ಸುಚೇತನ್ ಆಗಲಿದ್ದು, ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅವರು ಕಾನೂನು ಸಲಹೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು ಲಿಂಗ ಬದಲಾವಣೆ ನಿರ್ಧಾರವನ್ನು ನಾನು ನನ್ನದೇ ಆದ ರೀತಿಯಲ್ಲಿ ಕೈಗೊಳ್ಳುತ್ತಿದ್ದೇನೆ. ಈ ವಿಷಯದಲ್ಲಿ ನನ್ನ ತಂದೆ ತಾಯಿಯನ್ನು ಎಳೆಯಬೇಡಿ. ಬಾಲ್ಯದಿಂದಲೂ ನನ್ನ ಮಾನಸಿಕತೆಯ ಬಗ್ಗೆ ನನ್ನ ತಂದೆಗೆ ಗೊತ್ತು. ಹಾಗಾಗಿ ತಂದೆ ಕೂಡ ಸಪೋರ್ಟ್ ಮಾಡುತ್ತಾರೆಂಬ ವಿಶ್ವಾಸವನ್ನು ಸುಚೇತನಾ ಅವರು ವ್ಯಕ್ತಪಡಿಸಿದ್ದಾರೆ.ಟ್ರಾನ್ಸ್ ಮ್ಯಾನ್ ಆಗಿ ನಾನು ಪ್ರತಿದಿನ ಎದುರಿಸುತ್ತಿರುವ ಸಾಮಾಜಿಕ ಕಿರುಕುಳವನ್ನು ನಿಲ್ಲಿಸಲು ಬಯಸುತ್ತೇನೆ ಎಂದು ಸುಚೇತನಾ ಭಟ್ಟಾಚಾರ್ಯಾ ಅವರು ಮಾಧ್ಯವೊಂದಕ್ಕೆ ತಿಳಿಸಿದ್ದಾರೆ.