ನ್ಯೂಸ್ ನಾಟೌಟ್: ಮನುಷ್ಯನ ಜೀವನ ಕ್ಷಣಿಕ. ಈಗ ಬದುಕಿದ್ದ ವ್ಯಕ್ತಿ ಕೆಲವು ಸಮಯದ ನಂತರ ಜೀವಂತವಾಗಿರುತ್ತಾನೆ ಅನ್ನೋದು ಕಷ್ಟ. ಆದರೆ ಒಂದು ಜೀವವನ್ನು ಬದುಕಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬಹುದು ಅನ್ನುವುದು ನಿಜ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದೆ. ಮೊದಲೆಲ್ಲ ಐವತ್ತು ವರ್ಷದ ನಂತರ ಹೃದಯಾಘಾತ ಸಂಭವಿಸುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಇತ್ತೀಚಿಗೆ ಸಣ್ಣ ವಯಸ್ಸಿನ ಯುವಕರೂ ಕೂಡ ಮಾರಕ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ.
ಹೌದು, ತುರ್ತು ಹೃದಯಾಘಾತ ಸಂಭವಿಸಿದಾಗ ಏನು ಮಾಡಬೇಕು ಅನ್ನುವುದು ಹೆಚ್ಚಿನವರಿಗೆ ತಿಳಿಯುವುದಿಲ್ಲ. ಮನೆಯವರು ಗಾಬರಿ ಬಿದ್ದು ಆಂಬ್ಯುಲೆನ್ಸ್ಗೆ ಫೋನ್ ಮಾಡುತ್ತಾರೆ. ಕೆಲವರಿಗೆ ಗಾಬರಿಯಿಂದ ಕೈ ಕಾಲುಗಳೇ ಅಲುಗಾಡುವುದಿಲ್ಲ. ಹೃದಯಾಘಾತವಾದ ವ್ಯಕ್ತಿಯನ್ನು ಬದುಕಿಸುವುದಕ್ಕೆ ಸಮಯವೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಇದೊಂದು ವಸ್ತು ನಿಮ್ಮ ಜೇಬಿನಲ್ಲಿದ್ದರೆ ಸಂಭವನೀಯ ದುರಂತವನ್ನು ತಪ್ಪಿಸಬಹುದಾಗಿದೆ ಅನ್ನುವ ವಿಡಿಯೋ ವೈರಲ್ ಆಗುತ್ತಿದೆ. ಅದು ಬೇರ್ಯಾವ ವಸ್ತವೂ ಅಲ್ಲ. ಹಿತ್ತಲ ಗಿಡ ಮದ್ದಲ್ಲ ಅಂತಾರಲ್ವಾ ಹಾಗೆಯೇ ಮನೆಯ ಹಿತ್ತಲಲ್ಲಿಯೇ ಬೆಳೆಯುವ ಶುಂಠಿಯ ಪೀಸ್. ಅದನ್ನು ತೆಗೆದುಕೊಳ್ಳಿ. ಹೃದಯಾಘಾತಕ್ಕೆ ಕಾರಣವಾದ ವ್ಯಕ್ತಿಯನ್ನು ನೆಲದಲ್ಲಿ ಕೂರಿಸಿ ಅಗೆಯಲು ಹೇಳಿ. ಹಾಗೆ ಅಗೆದ ಬಳಿಕ ಆತ ಹೃದಯದ ಬ್ಲಾಕ್ ಸಮಸ್ಯೆಯಿಂದ ಹೃದಯಾಘಾತವಾದ ವ್ಯಕ್ತಿ ಪಾರಾಗುತ್ತಾರೆ. ಮಾತ್ರವಲ್ಲ ಜೀವ ಉಳಿಯುತ್ತದೆ ಎಂದು ತಜ್ಞರೊಬ್ಬರು ಹೇಳುತ್ತಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಶೇರ್ ಆಗಿದ್ದು ಕುತೂಹಲಕ್ಕೆ ಕಾರಣವಾಗಿದೆ. ಇದರ ಸತ್ಯಾಸತ್ಯತೆಯನ್ನು ಓದುಗರು ವೈದ್ಯರ ಬಳಿ ಸಂಪರ್ಕಿಸಿಯೇ ಮುಂದುವರಿಯಬೇಕಾಗಿ ವಿನಂತಿಸುತ್ತಿದ್ದೇವೆ.