ನ್ಯೂಸ್ ನಾಟೌಟ್: ಬಡವರಿಗೆ ನೀಡುವುದಕ್ಕಾಗಿ 10 ಕೆಜಿ ಅಕ್ಕಿ ಕೊಡೋ ಅನ್ನಭಾಗ್ಯ ಯೋಜನೆ ಜುಲೈ 1ರಿಂದ ಜಾರಿಯಾಗೋದು ಅನುಮಾನ ಎಂಬ ಸ್ಪಷ್ಟ ಸಂದೇಶವನ್ನು ಸಿಎಂ ಸಿದ್ದರಾಮಯ್ಯನವರು ನೀಡಿದ್ದಾರೆ. ಕೇಂದ್ರ ಸರಕಾರ ಡರ್ಟಿ ಪೊಲಿಟಿಕ್ಸ್ ಮಾಡುವುದರಿಂದ ಅಕ್ಕಿ ಸಿಗುವುದು ವಿಳಂಬವಾಗುತ್ತದೆ ಎಂದು ಸಿದ್ದು ತಿಳಿಸಿದ್ದಾರೆ.
ಕರ್ನಾಟಕದಲ್ಲೇ ಅನ್ನಭಾಗ್ಯ ಯೋಜನೆಗೆ ಬಹಳಷ್ಟು ಅಕ್ಕಿ ಸಿಗಲ್ಲ. ಓಪನ್ ಮಾರ್ಕೆಟ್ಗೆ ಹೋಗ್ಬೇಕು, ಟೆಂಡರ್ ಕರಿಬೇಕು. ಹೀಗೆಲ್ಲ ಆದ್ರೆ ಇನ್ನೂ 2 ತಿಂಗಳು ಹೆಚ್ಚು ಸಮಯ ಆಗುತ್ತೆ. ತೆಲಂಗಾಣ, ಪಂಜಾಬ್ ಸೇರಿದಂತೆ ಎಲ್ಲಾ ಕಡೆ ಅಕ್ಕಿ ಖರೀದಿ ಮಾಡಲು ಕೇಳಿದ್ದೇವೆ. 1 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಕೇವಲ ಒಂದು ತಿಂಗಳು ನಮಗೆ ಕೊಡೋಕೆ ಸಾಧ್ಯ ಅಂತಾ ಛತ್ತಿಸ್ಘಡ ಹೇಳಿದೆ. 42 ರೂಪಾಯಿ ಒಂದು ಕೆಜಿಗೆ ಆಗುತ್ತೆ ಆಂಧ್ರದವರು ಹೇಳಿದ್ದಾರೆ. ಹೀಗಾಗಿ ಕೇವಲ ಗೋಧಿ ಮಾತ್ರ ಕೊಡೋಕೆ ಸಾಧ್ಯ ಅಂತಾ ತೆಲಂಗಾಣ ಹೇಳಿದೆ ಎಂದು ಸಿದ್ದರಾಮಯ್ಯ ಹೇಳಿದ್ರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾನು ಸಿಎಂ ಆಗಿದ್ದೇನೆ. ನಮ್ಮದು ಸಮ್ಮಿಶ್ರ ಸರ್ಕಾರ ಅಲ್ಲ. 136 ಶಾಸಕರು ನಮ್ಮ ಪಕ್ಷದಿಂದ ಆಯ್ಕೆ ಆಗಿದ್ದಾರೆ. ಅವರು ನನ್ನನ್ನ ಆಯ್ಕೆ ಮಾಡಿದ್ದಾರೆ. ಕೇಂದ್ರಿಯ ಭಂಡಾರ, ಎನ್ಸಿಸಿಎಫ್, ನಾಫೆಡ್ನಿಂದ ಖರೀದಿಗೆ ಪಟ್ಟಿ ನೀಡಲಿದ್ದಾರೆ. ನಂತರ ಅಕ್ಕಿ ಖರೀದಿಯ ಬಗ್ಗೆ ನಿರ್ಧಾರವಾಗಲಿದೆ. 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನಮ್ಮ ಹತ್ರ ಇದೆ, ಕೊಡ್ತೀವಿ ಅಂತಾ ಹೇಳಿ ಈಗ ಯಾಕೆ ಕೊಡ್ತಿಲ್ಲ. ಜೂನ್ 12ನೇ ತಾರೀಖು ಅವ್ರು ನಮಗೆ ಯಾಕೆ ಪತ್ರ ಬರೆದ್ರು. ನಮಗೆ ಯಾಕೆ ಓಕೆ ಅಂತಾ ಹೇಳಿದ್ರು ಎಂದು ಸಿಎಂ ಪ್ರಶ್ನಿಸಿದ್ದಾರೆ.