ನ್ಯೂಸ್ ನಾಟೌಟ್: ಹದಿಹರೆಯದವರ ನಡುವಿನ ಕ್ರಿಕೆಟ್ ಪಂದ್ಯವು ದುರಂತದಲ್ಲಿ ಕೊಲೆಯಲ್ಲಿ ಅಂತ್ಯವಾಗಿದೆ. ಕಾನ್ಪುರದ ಘಟಂಪುರ ಪ್ರದೇಶದ ರಹತಿ ಡೇರಾ ಗ್ರಾಮದಲ್ಲಿ 17 ವರ್ಷದ ಆಟದ ವಿಚಾರಕ್ಕೆ ಬಾಲಕನೊಬ್ಬ 14 ವರ್ಷದ ಬಾಲಕನ ಕತ್ತು ಹಿಸುಕಿ ಕೊಂದಿದ್ದಾನೆ.
ಮೃತ ಸಚಿನ್ (14) ಮತ್ತು ಆರೋಪಿ ಹರಗೋವಿಂದ್ (17) ಇಬ್ಬರೂ ರಹತಿ ಡೇರಾ ಗ್ರಾಮದ ನಿವಾಸಿಗಳು. ಗ್ರಾಮದ ಮೈದಾನದಲ್ಲಿ ತಮ್ಮ ಸ್ನೇಹಿತರೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಡುತ್ತಿದ್ದರು. ವಿಜೇತರಿಗೆ 10 ರೂ ಎಂದು ಪಂದ್ಯ ಕಟ್ಟಲಾಗಿತ್ತು. ಹರಗೋವಿಂದ್ಗೆ ಬೌಲಿಂಗ್ ಮಾಡುತ್ತಿದ್ದ ಸಚಿನ್ ನಂತರದ ಆಟಗಾರರನ್ನು ಔಟ್ ಮಾಡಿದ್ದಾನೆ. ಆದರೆ ಹರಗೋವಿಂದ್ ತಾವು ಔಟ್ ಆಗಿದ್ದನ್ನು ಒಪ್ಪಿಕೊಳ್ಳಲು ನಿರಾಕರಿಸಿದ. ಸಚಿನ್ ಈ ವಿಷಯಕ್ಕೆ ವಾದ ಮಾಡಲು ಪ್ರಾರಂಭಿಸಿದ್ದಾನೆ, ವಾದವು ವಿಕೋಪಕ್ಕೆ ತಿರುಗಿ ಅನಾಹುತ ನಡೆದಿದೆ.
ಹರಗೋವಿಂದ್ ತನ್ನ ಸಹೋದರ ಬ್ರಜೇಶ್ನನ್ನು ಕರೆದು ಇಬ್ಬರೂ ಸಚಿನ್ಗೆ ಥಳಿಸಿದ್ದಾರೆ. ಹರಗೋವಿಂದ್ ನಂತರ ಸಚಿನ್ ಮೇಲೆ ಏರಿ, ನೆಲಕ್ಕೆ ಬೀಳಿಸಿ ಕತ್ತು ಹಿಸುಕಿದ್ದಾನೆ. ಇತರ ಮಕ್ಕಳಿಂದ ಹೊಡೆದಾಟದ ಬಗ್ಗೆ ತಿಳಿದು ಸಚಿನ್ ಕುಟುಂಬದವರು ಮೈದಾನಕ್ಕೆ ಧಾವಿಸಿದ್ದಾರೆ.
ಅಷ್ಟೊತ್ತಿಗಾಗಲೇ ಸಚಿನ್ ಸ್ಥಿತಿ ಗಂಭೀರವಾಗಿತ್ತು. ಘಟಂಪುರ ಆಸ್ಪತ್ರೆಗೆ ತಲುಪಿದಾಗ ಸಚಿನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ವಿಚಾರ ತಿಳಿದ ಕೊತ್ವಾಲಿ ಉಸ್ತುವಾರಿ ವಿಕ್ರಮ್ ಸಿಂಗ್ ಅವರು ತಮ್ಮ ತಂಡದೊಂದಿಗೆ ಗ್ರಾಮಕ್ಕೆ ತೆರಳಿ ತನಿಖೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಸಚಿನ್ ದೇಹವನ್ನು ಕಳುಹಿಸಲಾಗಿದ್ದು ತನಿಖೆ ನಡೆಯುತ್ತಿದೆ.