ನ್ಯೂಸ್ ನಾಟೌಟ್ :ಈಗಿನ ಕಾಲದಲ್ಲಿ ಹಣವಿಲ್ಲದ ಜೀವನವನ್ನು ಊಹಿಸಲು ಸಾಧ್ಯವಿಲ್ಲ.ಒಂದು ಸಲ ಅಂಗಡಿಗೆ ಪ್ರವೇಶ ಮಾಡಿದ್ರೆ ಕಡಿಮೆ ಅಂದ್ರೂ 500 ರೂ.ಖರ್ಚಾಗುತ್ತೆ. ದಿನಸಿ ವಸ್ತುಗಳು,ಗೃಹಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ.ಸಂಬಳ ಎಷ್ಟಿದ್ದರೂ ಸಾಕಾಗೋದಿಲ್ಲ ಅನ್ನುವ ಕೂಗು ಕೇಳಿ ಬರುತ್ತಿದೆ. ಆದರೆ ಇಲ್ಲೊಬ್ಬರು ಮಹಿಳೆಯಿದ್ದಾರೆ. ಅವರಿಗೆ ತಿಂಗಳಿಗೆ 25 ರೂ. ಸಂಬಳವೆಂದರೆ ನೀವು ನಂಬಲೇ ಬೇಕು. ಅರೆ! ಇದೇನಿದು? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡದಿರದು.
ಹೌದು, ಸುಮಾರು ಮೂರು ದಶಕಗಳಿಂದ ಸರ್ಕಾರಿ ಶಾಲೆಯಲ್ಲಿ ಕಸ ಗುಡಿಸುವ 67 ವರ್ಷದ ಕಾಶ್ಮೀರಿ ಮಹಿಳೆಯೊಬ್ಬರು ತಿಂಗಳಿಗೆ ಕೇವಲ 25 ರೂ. ಗಳಿಸುತ್ತಿದ್ದರು.ಅದಲ್ಲದೇ ಕಳೆದ ಏಳು ವರ್ಷಗಳಿಂದ ಇವರಿಗೆ ವೇತನ ಸಿಕ್ಕಿಲ್ಲವಂತೆ!. ಈ ಬಗ್ಗೆ ನಿಸಾರಾ ಬೇಗಂ ಮಹಿಳೆ 2017ರಿಂದ ಪ್ರತಿಭಟನೆ ನಡೆಸುತ್ತಿದ್ದರೂ ಹೈಕೋರ್ಟ್ ಆದೇಶ ನೀಡಿದ್ದರೂ ಇನ್ನೂ ಇವರಿಗೆ ಸಂಬಳ ಸಿಕ್ಕಿಲ್ಲ. ಆದರೂ ನಿಸಾರಾ ಬೇಗಂ ಎರಡು ಕಾರಣಗಳಿಗಾಗಿ ಕೆಲಸ ಮುಂದುವರೆಸಿದ್ದಾರೆ. ಅವರ ಮಾನಸಿಕ ಅಸ್ವಸ್ಥತೆ ಹೊಂದಿರುವ ಮಗಳಿಗೆ ಇದು ಆಧಾರವಾಗಿತ್ತು. ಈ ಕೆಲಸ ಹಾಗೂ ಶಾಲೆಯನ್ನು ಸ್ವಚ್ಛವಾಗಿಡುವಲ್ಲಿ ಇವರು ಸಂತೋಷವನ್ನು ಕಾಣುತ್ತಿದ್ದಾರಂತೆ.
ಇವರು ಕೆಲಸ ಮಾಡಲು ಪ್ರಾರಂಭಿಸಿದಾಗ 25 ರೂ ಸಂಬಳವಾಗಿ ನಿಯೋಜನೆ ಆಗಿತ್ತು. ಇದರಲ್ಲಿ ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಸ್ವೀಪರ್ಗಳು, ಗಾರ್ಡ್ಗಳು ಮತ್ತು ಅಡುಗೆಯವರು ಕೂಡ ಸೇರಿದ್ದಾರೆ.ಆತಂಕಗೊಂಡ ನೆರೆಹೊರೆಯವರು ಬಂಡಿಪೋರಾದ ಮುಖ್ಯ ಶಿಕ್ಷಣಾಧಿಕಾರಿಯನ್ನು ಭೇಟಿ ಮಾಡಿದ್ದು, ಆಕೆಯ ವೇತನವನ್ನು 75 ರೂ.ಗೆ ಹೆಚ್ಚಿಸುವಂತೆ ಶಾಲೆಗೆ ತಿಳಿಸುವಂತೆ ವಲಯ ಶಿಕ್ಷಣಾಧಿಕಾರಿಗೆ ಸೂಚಿಸಿದರು.2016ರ ಏಪ್ರಿಲ್ನಿಂದ ಆಗಸ್ಟ್ವರೆಗೆ ನಾಲ್ಕು ತಿಂಗಳ ಕಾಲ ಈ ಮೊತ್ತವನ್ನು ತಾನು ಪಡೆದಿದ್ದು, ಆ ನಂತರ ಸಂಬಳ ಬರುವುದು ನಿಂತುಹೋಗಿದೆ. ಸುಮಾರು ಏಳು ವರ್ಷಗಳಿಂದ ತಾವು ವೇತನವನ್ನು ಪಡೆದಿಲ್ಲ ಎಂದು ನಿಸಾರಾ ಬೇಸರದಿಂದ ಹೇಳಿದ್ದಾರೆ.
ಕನಿಷ್ಠ ವೇತನ ಮತ್ತು ನಿಯಮಿತ ಉದ್ಯೋಗಕ್ಕಾಗಿ ಒತ್ತಾಯಿಸಿ ಶಾಲಾ ಶಿಕ್ಷಣ ಇಲಾಖೆಯ ಸಾವಿರಾರು ಕಸಗುಡಿಸುವವರು, ಕಾವಲುಗಾರರು ಮತ್ತು ಅಡುಗೆಯವರಲ್ಲಿ ಇವರೂ ಒಬ್ಬರು. ಅವರು ಸೂರ್ಯ ಹುಟ್ಟುತ್ತಿದ್ದಂತೆಯೇ 67 ವರ್ಷದ ಕಾಶ್ಮೀರಿ ಮಹಿಳೆ ನಿಸಾರಾ ಬೇಗಂ ಮಾನಸಿಕ ಅಸ್ವಸ್ಥಳಾಗಿರುವ ತನ್ನ 32ರ ಹರೆಯದ ಮಗಳಿಗೆ ಮನೆಯಲ್ಲಿ ಬಿಟ್ಟು ಸರಕಾರದ ಕಸಗುಡಿಸುವ ಕೆಲಸಕ್ಕೆ ಮುಂದಾದರು.ನಿಸಾರಾ ಅವರು ವೇತನವನ್ನು ನಿಲ್ಲಿಸಿದ ನಂತರ ಕಷ್ಟಪಡುತ್ತಿದ್ದಾಗ ಕೆಲವು ಶಿಕ್ಷಕರು ಅವರಿಗೆ ಹಣ ನೀಡಿ ನೆರವಾಗುತ್ತಿದ್ದರು ಎಂದು ಹೇಳಲಾಗಿದೆ.
ಶಾಲೆಯನ್ನು ಸ್ವಚ್ಛವಾಗಿಡುವ ಬದ್ಧತೆಯಿದ್ದರೂ ಕಳೆದ ಮೂರು ದಶಕಗಳಿಂದ ಯಾವ ರೀತಿಯ ಪರಿಹಾರ ನೀಡಲಾಗಿದೆ ಎಂದು ಹೇಳುವಾಗ ನಿಸಾರ ಅವರ ಕಣ್ಣಲ್ಲಿ ನೀರು ತುಂಬಿತ್ತು. ”ನನ್ನ ಮೂಲಭೂತ ಅಗತ್ಯಗಳನ್ನು ಪೂರೈಸಲು ಇದು ಅಲ್ಲಿಂದ ಅಲ್ಲಿಗೆ ಸಾಕಾಗುತ್ತದೆ” ನಿಸಾರ ಉತ್ತರಿಸಿದ್ದಾರೆ.ಇವರ ಈ ಕಥೆ ಕೇಳಿದ್ರೆ ಎಂಥವರಿಗಾದ್ರೂ ಮನಸ್ಸು ಕರಗದಿರದು.ಅಯ್ಯೋ ಪಾಪ ಅನ್ನಿಸದಿರದು.