ನ್ಯೂಸ್ ನಾಟೌಟ್: ಏರಿಕೆಯಾಗಿರೋ ಕರೆ ಬಿಲ್ ವಾಪಾಸ್ ಇಲ್ಲ ಎಂದು ಸಿ.ಎಂ ಸಿದ್ದರಾಮಯ್ಯನವರು ಹೇಳಿದ್ದಾರೆ. 2 ತಿಂಗಳ ಕರೆಂಟ್ ಬಿಲ್ ಒಟ್ಟಿಗೆ ಬಂದಿದ್ದು,ಅದಕ್ಕಾಗಿ ಬಿಲ್ ಜಾಸ್ತಿ ಬಂದಿದೆ.ಆದರೆ ವಿದ್ಯುತ್ ದರ ಕಡಿಮೆ ಆಗಲ್ಲ ಎಂದು ರಾಜ್ಯದ ಜನರಿಗೆ ಸಿ.ಎಂ ಸಿದ್ದು ಶಾಕ್ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು ಮುಂದಿನ ತಿಂಗಳಿನಿಂದ ಸರಿಯಾದ ಬಿಲ್ ಬರುತ್ತದೆ.ಆಗ ಯಾವುದೇ ಸಮಸ್ಯೆಯಾಗಲ್ಲ.ಜನರು ಈ ಬಗ್ಗೆ ಯಾವುದೇ ತಲೆಬಿಸಿ ಮಾಡುವ ಅಗತ್ಯವಿಲ್ಲ.ಎರಡು ತಿಂಗಳ ಕರೆಂಟ್ ಬಿಲ್ ಬಂದಿರುವುದರಿಂದ ಜನರಿಗೆ ಹೊರೆ ಅಂತ ಅನಿಸಿದೆ ಅಷ್ಟೇ ಎಂದಿದ್ದಾರೆ.