ನ್ಯೂಸ್ ನಾಟೌಟ್: ರಸ್ತೆಯಲ್ಲಿ ಕುಡಿದು ತೂರಾಡುತ್ತಿದ್ದ ಅಜ್ಜನೊಬ್ಬನ ಅವಾಂತರದಿಂದಾಗಿ ಸುಳ್ಯದ ಪತ್ರಕರ್ತರೊಬ್ಬರ ಮೊಬೈಲ್ ಪುಡಿ..ಪುಡಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಕೆಲಸ ಮುಗಿಸಿ ಕಚೇರಿಯಿಂದ ಹೊರಟ ಪತ್ರಕರ್ತರು ಎಂದಿನಂತೆ ಸುಳ್ಯ ಬಸ್ ನಿಲ್ದಾಣಕ್ಕೆ ಹೊರಟಿದ್ದರು. ಈ ವೇಳೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಅಡ್ಡಾದಿಡ್ಡಿಯಾಗಿ ಬಂದ ಕುಡುಕ ಅಜ್ಜ ಇವರ ಮೇಲೆ ಬಿದ್ದಿದ್ದಾನೆ. ಹಠಾತ್ ಮೇಲೆ ಬಿದ್ದಿದ್ದರಿಂದ ಪತ್ರಕರ್ತರ ಕೈನಲ್ಲಿದ್ದ ಮೊಬೈಲ್ ಜಾರಿ ರಸ್ತೆಗೆ ಬಿದ್ದಿದೆ. ಮೊಬೈಲ್ ಡಿಸ್ಪ್ಲೇ ಕಂಪ್ಲೀಟ್ ಪುಡಿ..ಪುಡಿಯಾಗಿದೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಇಷ್ಟೆಲ್ಲ ಘಟನೆ ಆಗಿದ್ದರೂ ಕುಡುಕ ಅಜ್ಜ ತನಗೆ ಅದಕ್ಕೂ ಸಂಬಂಧವಿಲ್ಲದಂತೆ ವಿಶಲ್ ಹಾಕಿಕೊಂಡು ರಸ್ತೆಯಲ್ಲಿ ಹೋಗುವ ವಾಹನಗಳನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡುತ್ತಿದ್ದ. ಸ್ಥಳೀಯರು ಕುಡುಕನಿಗೆ ಚೆನ್ನಾಗಿ ಬೈದು ಬುದ್ಧಿವಾದ ಹೇಳಿ ಕಳಿಸಿದ್ದಾರೆ. ಇತ್ತ ಮೊಬೈಲ್ ಪುಡಿಯಾಗಿದ್ದರಿಂದ ಪತ್ರಕರ್ತ ಅದನ್ನು ಸುಳ್ಯದ ಮೊಬೈಲ್ ಶಾಪ್ವೊಂದಕ್ಕೆ ರಿಪೇರಿಗಾಗಿ ನೀಡಿದ್ದಾರೆ. ಕಳೆದ ತಿಂಗಳಷ್ಟೇ ಅವರು ಡಿಸ್ ಪ್ಲೇ ಹೊಸತ್ತು ಹಾಕಿದ್ದರು. ಇದೀಗ ಒಂದೇ ತಿಂಗಳಲ್ಲಿ ಎರಡನೇ ಡಿಸ್ಪ್ಲೇ ಚೇಂಜ್ ಮಾಡುವ ಪರಿಸ್ಥಿತಿ ಅವರಿಗೆ ಎದುರಾಗಿರುವುದು ವಿಪರ್ಯಾಸ.