ನ್ಯೂಸ್ ನಾಟೌಟ್: ಗುಜರಾತ್ನ ಕರಾವಳಿಯಲ್ಲಿ ಬಿಪರ್ ಜಾಯ್ ಚಂಡಮಾರುತ ಅಬ್ಬರಿಸುತ್ತಿದೆ. ಸಿಕ್ಕಿಸಿಕ್ಕಿದಲ್ಲೆಲ್ಲ ಹಾನಿಯುಂಟು ಮಾಡಿಕೊಂಡು ಮುನ್ನುಗ್ಗುತ್ತಿದೆ. ಸಹಸ್ರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ಭಾರೀ ಪ್ರಮಾಣದಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಈ ಮಧ್ಯೆ, ಕಾರ್ಯಾಚರಣೆ ವೇಳೆಯ ವಿಡಿಯೋವೊಂದು ಸಖತ್ ವೈರಲ್ ಆಗಿದೆ.
ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ನಾಲ್ಕು ದಿನಗಳ ಕಂದಮ್ಮನನ್ನು ತಮ್ಮ ತೋಳುಗಳಲ್ಲಿ ಸ್ಥಳಾಂತರಿಸುವ ವಿಡಿಯೋ ಫುಲ್ ವೈರಲ್ ಆಗಿದೆ. ದ್ವಾರಕಾ ಜಿಲ್ಲೆಯ ಭನ್ವಾಡ್ ಗ್ರಾಮದ ಕುಟುಂಬವನ್ನು ಸ್ಥಳಾಂತರಿಸಲಾಯಿತು. ಈ ವೇಳೆ ಕಂದಮ್ಮನ ವಿಡಿಯೋ ಭಾರೀ ಗಮನ ಸೆಳೆದಿದೆ. ಈ ಟ್ವೀಟ್ವನ್ನು ಗುಜರಾತ್ ಪೊಲೀಸ್ ಮಹಾ ನಿರ್ದೇಶಕರ ಅಧಿಕೃತ ಖಾತೆಯೂ ಕೂಡ ಶೇರ್ ಮಾಡಿದ್ದು ಅವರು ಸುರಕ್ಷಿತ ಕೈಗಳಲ್ಲಿದ್ದಾರೆಂದು ಶೀರ್ಷಿಕೆ ನೀಡಿರುವುದು ಗಮನ ಸೆಳೆದಿದೆ.