ನ್ಯೂಸ್ ನಾಟೌಟ್ :ಇನ್ಮುಂದೆ ವರದಕ್ಷಿಣೆ ಕೇಳೋರಿಗೆಲ್ಲ ಎಚ್ಚರದ ಗಂಟೆಯಾಗಲಿದೆ ಈ ಒಂದು ಘಟನೆ.ಮದುವೆ ಮಂಟಪದಲ್ಲಿ ವಧುವಿಗೆ ಹಾರ ಬದಲಾಯಿಸುವ ಮುನ್ನ ವರ ವರದಕ್ಷಿಣೆ ಬೇಡಿಕೆ ಇಟ್ಟು ಪೇಚಿಗೆ ಸಿಲುಕಿದ ಅಪರೂಪದ ಘಟನೆ ವರದಿಯಾಗಿದೆ.
ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಪ್ರತಾಪಗಢದಲ್ಲಿ.ಮದುಮಗ ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಅನ್ನುವಷ್ಟರಲ್ಲೇ ವರದಕ್ಷಿಣೆ ಬೇಡಿಕೆ ಇಟ್ಟಿದ್ದಾನೆ.ಇದರಿಂದ ವಧು ಕಡೆಯವರೇ ಶಾಕ್ ಆಗಿದ್ದು,ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವರ ಮತ್ತು ಆತನ ಸಂಬಂಧಿಕರನ್ನು ಒತ್ತೆಯಾಳಾಗಿರಿಸಿಕೊಂಡರು.ಇದರಿಂದ ಸಿಟ್ಟಾದ ವಧು ಕಡೆಯವರು ವರನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ.ವರನನ್ನು ಅಮರಜಿತ್ ವರ್ಮ ಎಂದು ಗುರುತಿಸಲಾಗಿದೆ.ಈತ ಜೌನ್ಪುರದ ಸಕ್ರಾ ಗ್ರಾಮದ ನಿವಾಸಿ.
ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.ವರನ ಕಡೆಯವರು ಕುಡಿದು ಅಮಲಿನಲ್ಲಿದ್ದರು ಎಂದು ಹೇಳಲಾಗಿದೆ.ಈ ಸಂದರ್ಭ ವಧುವಿನ ಕಡೆಯವರ ಮೇಲೆ ಹಲ್ಲೆಗೆ ಯತ್ನಿಸಿದರು ಎಂಬ ಆರೋಪ ಕೂಡ ಕೇಳಿಬಂದಿದೆ.ವೈರಲ್ ಆಗಿರುವ ವಿಡಿಯೋದಲ್ಲಿ ನೀವು ಆಕ್ರೋಶಗೊಂಡ ವಧುವಿನ ಕುಟುಂಬ ವರನನ್ನು ಮರಕ್ಕೆ ಕಟ್ಟಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ವಧು-ವರನ ಕಡೆಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ದುರು. ಸಂಧಾನ ಮಾಡಲು ಪ್ರಯತ್ನಿಸಿದ್ದು,ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿದು ಬಂದಿದೆ.