ನ್ಯೂಸ್ ನಾಟೌಟ್ : ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸುಳ್ಯ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು ಸುಳ್ಯ ಇದರ ಜಂಟಿ ಆಶ್ರಯದಲ್ಲಿ ‘ವಿಶ್ವ ರಕ್ತದಾನಿಗಳ ದಿನಾಚರಣೆ’ಯನ್ನು ಆಚರಿಸಲಾಯಿತು.ಈ ವೇಳೆ ಸಮಾಜಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ನಡೆಯಿತು.
ಸುಳ್ಯ ತಹಶೀಲ್ದಾರ್ ಜಿ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ “ರಕ್ತದಾನ ಮಹಾದಾನ,ದೇವರ ಹೆಸರಲ್ಲಿ ರಕ್ತದಾನ ಮಾಡುವ ಪ್ರತಿಯೊಬ್ಬರು ತಮ್ಮ ಶತ್ರುಗಳಾದರೂ ಅವರ ಜೀವ ಉಳಿಸುತ್ತಾರೆ.ಎಲ್ಲರೂ ರಕ್ತದಾನ ಮಾಡಿ ಪುಣ್ಯದ ಕೆಲಸದಲ್ಲಿ ಭಾಗಿಯಾಗಿ ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ.ಪ್ರ.ದ.ಕಾಲೇಜು ಪ್ರಾಂಶುಪಾಲ ಸತೀಶ್ ಕುಮಾರ್ ಕೆ.ಆರ್ ವಹಿಸಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕಿನ ಸಭಾಪತಿ ಸುಧಾಕರ್ ರೈ ಅಭಿನಂದನಾ ಭಾಷಣ ಮಾಡಿದರು . ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಕೆ.ಎಂ ಮುಸ್ತಾಫ , ಭಾರತೀಯ ಜಿಲ್ಲಾ ಪ್ರತಿನಿಧಿ ಸಿ.ಎ ಗಣೇಶ್ ಭಟ್ , ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಖಜಾಂಜಿ ವಿನಯಕುಮಾರ್ , ಕಾರ್ಯದರ್ಶಿ ತಿಪ್ಪೇಶಪ್ಪ ಹೆಚ್.ಟಿ. ಉಪಸ್ಥಿತರಿದ್ದರು.
ಈ ವೇಳೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ಕ್ರಾಸ್ ನ ಮುಖ್ಯಸ್ಥ ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಧರ್ಮಸ್ಥಳ ಕಾರುಣ್ಯ ಸಂಸ್ಥೆ ಪೈಚಾರು ಸಂಘ, NMC ಯೂತ್ ರೆಡ್ ಕ್ರಾಸ್ , ಲಯನ್ಸ್ ಕ್ಲಬ್ ಹಿರಿಯಡ್ಕ ಉಡುಪಿ,ರೋಟರಿ ಕ್ಲಬ್ ಸುಳ್ಯ,ರೋಟರಿ ಕ್ಲಬ್ ಸುಳ್ಯ ಸಿಟಿ, ಶೌರ್ಯ ವಿಪತ್ತು ಘಟಕ ಕ್ಷೇತ್ರ ಧ. ಗ್ರಾ.ಯೋ.(ರಿ) ಸಂಪಾಜೆ ವಲಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಶ್ರೀ ಕ್ಷೇತ್ರ ಧ. ಗ್ರಾ.ಯೋ.(ರಿ) ಸುಬ್ರಹ್ಮಣ್ಯ ವಲಯ, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು, ಮಂಜುಶ್ರೀ ಗೆಳೆಯರ ಬಳಗ ಐವರ್ನಾಡು ರಕ್ತದಾನ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಂಘ ಸಂಸ್ಥೆಗಳನ್ನು ಸನ್ಮಾನಿಸಲಾಯಿತು. ರಾಮಕೃಷ್ಣ ಹಿಂದಿ ಲೆಕ್ಚರ್ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಉದಯ ಶಂಕರ್ ವಂದಿಸಿದರು.ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.