ನ್ಯೂಸ್ ನಾಟೌಟ್: ಇಲ್ಲೊಬ್ಬಳು ಮಹಿಳೆ CM ಸಿದ್ದರಾಮಯ್ಯ ನೀಡಿರುವ ಫ್ರೀ ಬಸ್ ಪ್ರಯಾಣದ ಭಾಗ್ಯದ ಭರ್ಜರಿ ಉಪಯೋಗ ಪಡೆದುಕೊಂಡಿದ್ದಾಳೆ. ತನ್ನ ಕೈಯಲ್ಲಿ ಹಣವಿಲ್ಲದಿದ್ದರೂ ಪ್ರಿಯಕರನ ಕಾಣುವುದಕ್ಕಾಗಿ ವಿವಾಹಿತ ಮಹಿಳೆ 11 ತಿಂಗಳ ಮಗುವನ್ನು ಬಿಟ್ಟು ಪುತ್ತೂರಿಗೆ ಬಂದಿದ್ದಾಳೆ. ಇದೀಗ ಇಲ್ಲಿಂದ ನಾಪತ್ತೆಯಾಗಿದ್ದಾಳೆ ಎಂದು ವರದಿಯಾಗಿದೆ.
ನಾಪತ್ತೆಯಾಗಿರುವ ಮಹಿಳೆ ಹುಬ್ಬಳ್ಳಿ ಮೂಲದವಳು. ಈಕೆಯ ಪ್ರಿಯಕರ ಕೂಡ ಅಲ್ಲಿಯವನೇ ಆಗಿದ್ದಾನೆ. ಇಬ್ಬರ ನಡುವೆ ಹಲವು ಸಮಯದಿಂದ ಪ್ರೇಮಾಂಕುರವಾಗಿತ್ತು. ಮದುವೆಗಾಗಿ ಇಬ್ಬರು ನಿಶ್ಚಯ ಮಾಡಿಕೊಂಡಿದ್ದರು. ಆದರೆ ಇಬ್ಬರ ನಡುವಿನ ಪ್ರೇಮ ನಡೆಯುತ್ತಿರುವಾಗಲೇ ಮಹಿಳೆಗೆ ಮತ್ತೊಬ್ಬನ ಜೊತೆ ಮದುವೆಯಾಯಿತು. ಇದೇ ನೋವಿನಲ್ಲಿ ಇತ್ತ ಪ್ರಿಯಕರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೋಡಿಂಬಾಡಿ ಸಮೀಪದ ತೋಟವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಅತ್ತ ಆಕೆಗೆ ಮಗುವೊಂದು ಜನಿಸಿತು. ಆದರೆ ಅಮರ ಪ್ರೇಮಿಗಳು ಒಬ್ಬರನ್ನೊಬ್ಬರು ಅಗಲಿ ಇರದಷ್ಟು ಮಟ್ಟಿಗೆ ಬಂದು ಬಿಟ್ಟಿದ್ರು. ಇನ್ನು ಆಗುವುದಿಲ್ಲ ಎಂದು ಆಕೆ ಪ್ರಿಯಕರನ ಕಾಣುವುದಕ್ಕೆ ಆಕೆ ಉಚಿತ ಬಸ್ ಏರಿಯೇ ಬಿಟ್ಟಿದ್ದಾಳೆ. ಗಂಡನಲ್ಲಿ ಆಧಾರ್ ಲಿಂಕ್ ಮಾಡಿ ಬರುತ್ತೇನೆಂದು ಸುಳ್ಳು ಹೇಳಿ ಮನೆಯಿಂದ ಎಸ್ಕೇಪ್ ಆಗಿದ್ದಾಳೆ. ಬಸ್ನಲ್ಲಿ ಆಧಾರ್ ತೋರಿಸಿ ಟಿಕೆಟ್ ಪಡೆಯುವುದು ಆಕೆಯ ಪ್ಲಾನ್ ಆಗಿತ್ತು. ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಆಧಾರ್ ಲಿಂಕ್ ಮಾಡಲು ಹೋದವಳು ತಡರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಪೂರ್ತಿ ಹುಡುಕಾಡಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಮನೆಯವರು ಆಕೆಯನ್ನು ಹುಡುಕಿಕೊಡುವಂತೆ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರ್ ಅವರಲ್ಲಿ ಮನವಿ ಮಾಡಿದ್ದಾರೆ. ಆದರೆ ಇಬ್ಬರೂ ಇಲ್ಲಿಯವರೆಗೆ ಸಿಕ್ಕಿಲ್ಲ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಸದ್ಯ ಟವರ್ ಲೊಕೇಶನ್ ಮೂಲಕ ನೋಡಿದಾಗ ಪುತ್ತೂರಿನಿಂದ ಸಿದ್ಧಕಟ್ಟೆಗೆ ಪರಾರಿಯಾದ ಮಾಹಿತಿ ಲಭ್ಯವಾಗಿದೆ.