ನ್ಯೂಸ್ ನಾಟೌಟ್ : ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ ಕಾರಣಕ್ಕೆ ಚಾಲಕನೊಬ್ಬ ವ್ಯಕ್ತಿಯನ್ನು ಮಿರ್ಜಾಪುರದಲ್ಲಿ ಬೊಲೆರೊ ಕಾರು ಹತ್ತಿಸಿ ಕೊಂದಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ತನ್ನ ಸಹಚರರೊಂದಿಗೆ ಬೈಕ್ನಲ್ಲಿ ಪರಾರಿಯಾಗಿದ್ದನು.
ವಿಂಧ್ಯಾಚಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊಲಾಹಿ ಗ್ರಾಮದ ನಿವಾಸಿ 52 ವರ್ಷದ ರಾಜೇಶ್ ದುಬೆ ಭಾನುವಾರ ತನ್ನ ಸೋದರಳಿಯನ ಮದುವೆಗೆ ಹೋಗಿದ್ದರು. ಸೋಮವಾರ ಬೆಳಗ್ಗೆ ಕಾರ್ಯಕ್ರಮ ಮುಗಿಸಿ ಹಿಂತಿರುಗಲು ಸ್ನೇಹಿತನ ಜೊತೆ ಬೊಲೆರೊ ಹತ್ತಿದ್ದಾರೆ. ಕಾರಿನಲ್ಲಿ ರಾಜಕೀಯ ಚರ್ಚೆ ಶುರುವಾಗಿ ಅದು ವಿಪರೀತ ಜಗಳಕ್ಕೆ ತಿರುಗಿದೆ.
ಕಾರು ಚಾಲಕ ಅಮ್ಜದ್ ಮೋದಿ-ಯೋಗಿ ಬಗ್ಗೆ ಕೆಟ್ಟದಾಗಿ ಮಾತನಾದ್ದ ಎನ್ನಲಾಗಿದ್ದು, ರಾಜೇಶ್ ದುಬೆ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿಯನ್ನು ಹೊಗಳಿದ್ದಕ್ಕೆ ಆತ ಸಿಟ್ಟಿಗೆದ್ದನು. ಇದು ಚಾಲಕ ಅಮ್ಜದ್ಗೆ ಇಷ್ಟವಾಗಲಿಲ್ಲ. ಇದಕ್ಕೆ ಒಪ್ಪದ ಚಾಲಕ ಆತನೊಂದಿಗೆ ಜಗಳ ಆರಂಭಿಸಿದ್ದಾನೆ. ವಿಷಯ ವಾಗ್ವಾದಕ್ಕೆ ತಿರುಗುತ್ತಿರುವುದನ್ನು ಕಂಡ ಕಾರಿನಲ್ಲಿದ್ದ ಮಹೋಖರ್ ಗ್ರಾಮದ ಮಾಜಿ ಮುಖ್ಯಸ್ಥ ಧೀರೇಂದ್ರ ಪಾಂಡೆ ಸಮಾಧಾನಪಡಿಸಿದರು. ಇದಾದ ಬಳಿಕ ಧೀರೇಂದ್ರ ತಮ್ಮ ಮನೆ ಬಂದ ನಂತರ ಕಾರಿನಿಂದ ಕೆಳಗಿಳಿದು ಹೋಗಿದ್ದರು.
ಇದಾದ ನಂತರ ಅಮ್ಜದ್, ರಾಜೇಶ್ ದುಬೆಯನ್ನು ಬಲವಂತವಾಗಿ ಕಾರಿನಿಂದ ಕೆಳಗಿಳಿಸಿದ್ದಾನೆ. ದುಬೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಚಾಲಕ ಕಾರನ್ನು ಅವರ ಮೇಲೆ ಹತ್ತಿಸಿ, 29 ಮೀಟರ್ ವರೆಗೆ ಎಳೆದೊಯ್ದಿದ್ದಾನೆ. ಇದರಿಂದ ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನು ನೋಡಿದ ಕುಟುಂಬಸ್ಥರು ಗಲಾಟೆ ಶುರು ಮಾಡಿದ್ದು ಇದನ್ನು ಕಂಡ ಅಮ್ಜದ್ ಸಹಚರನ ಬೈಕ್ನಲ್ಲಿ ಪರಾರಿಯಾಗಿದ್ದನು.
ಬೊಲೆರೊವನ್ನು ಮದುವೆಯ ಅತಿಥಿಗಳಿಗಾಗಿ ಬಾಡಿಗೆಗೆ ಪಡೆಯಲಾಗಿತ್ತು. ಬೊಲೆರೋ ಸವಾರರ ಹೇಳಿಕೆ ಹಾಗೂ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಸತತ 6 ಗಂಟೆಗಳ ಕಾರ್ಯಾಚರಣೆಯ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.