ನ್ಯೂಸ್ ನಾಟೌಟ್: ವಿಡಿಯೋಗಳಲ್ಲಿ ವಿದೇಶದಲ್ಲಿರುವ ಸ್ಕೈವಾಕ್ ಗ್ಲಾಸ್ ಬ್ರಿಡ್ಜ್ ನೋಡಿ ನಾವು ಪುಳಕಿತರಾಗಿದ್ದೇವೆ. ವಾಹ್…ಎಷ್ಟು ಚೆನ್ನಾಗಿದೆಯಲ್ವಾ ಎಂದು ಉದ್ಗಾರ ತೆಗೆದಿದ್ದೇವೆ. ಆದರೆ ಇನ್ನು ಮುಂದೆ ಸ್ಕೈವಾಕ್ ಗ್ಲಾಸ್ ಬ್ರಿಡ್ಜ್ ನೋಡೋಕೆ ದೂರದ ಪ್ರದೇಶಗಳಿಗೆ ಹೋಗಬೇಕಿಲ್ಲ. ಕರ್ನಾಟಕದ ಕೊಡಗಿನಲ್ಲಿರುವ ಮಡಿಕೇರಿ ಹೊರವಲಯದ ಉಡೋತ್ ಮೊಟ್ಟೆಯ ಪಪ್ಪೀಸ್ ಪ್ಲಾಂಟೇಷನ್ ಗೆ ಬಂದ್ರೆ ಸಾಕು. ಇಲ್ಲಿನ ಸ್ಕೈವಾಕ್ ಗ್ಲಾಸ್ ಬ್ರಿಡ್ಜ್ ನಲ್ಲಿ ರೋಚಕ ಅನುಭವ ಪಡೆಯುವುದರ ಜತೆಗೆ ಮಸ್ತ್ ಮಜಾ ಮಾಡಬಹುದು.
ಏನಿದರ ವಿಶೇಷತೆ?
ಸುಮಾರು 32 ಮೀ. ಉದ್ದದ 2 ಮೀಟರ್ ಅಗಲದ 18 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಸುಮಾರು 5 ಟನ್ ಭಾರ ಹೊರುವ ಸಾಮರ್ಥ್ಯ ಹೊಂದಿರುವ ಈ ಬ್ರಿಡ್ಜ್ನಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇದು. ಕರ್ನಾಟಕದ ಮೊದಲ ಉದ್ದದ ಗಾಜಿನ ಸೇತುವೆಯಾಗಿದೆ.
ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಆಕರ್ಷಕ ಸೇತುವೆಯನ್ನು ಉದ್ಭಾಟಿಸಿದರು. ನಂತರ ಮಾತನಾಡಿದ ಪೊನ್ನಣ್ಣ, ‘ಕೊಡಗು ಪ್ರಕೃತಿ ದತ್ತವಾದ ಜಿಲ್ಲೆಯಾಗಿದೆ. ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕು ಎಂದರು. ಈ ಅಪರೂಪದ ಯೋಜನೆಯಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಜೊತೆಗೆ ಅವಲಂಬಿತರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ತಿಳಿಸಿದರು. ಗ್ರೀನ್ ಸಿಟಿ ಫೋರಂ ನ ಅಧ್ಯಕ್ಷ ಜೆಯ್ಯಂಡ ಸತ್ಯ, ಉದ್ಯಮಿ ಹೆಚ್.ಎಂ.ನಂದಕುಮಾರ್ ಮತ್ತಿತರರು ಉಪಸ್ಥಿತರಿದ್ದರು.