ನ್ಯೂಸ್ ನಾಟೌಟ್ : ಹಸಿವು ಅನ್ನೋದನ್ನು ತಡೆದು ಕೊಳ್ಳೋದು ಸ್ವಲ್ಪ ಕಷ್ಟವೇ.ಯಾವ ಜೀವಿಯೇ ಆಗಿರಲಿ ಹಸಿವಾದಾಗ ಅದಕ್ಕೆ ಸಂಬಂಧಿಸಿದ ಆಹಾರವನ್ನು ಅವುಗಳು ಅರಸುತ್ತವೆ. ಅದೊಂದು ಕಾಲವಿತ್ತು ದನ,ಜಿಂಕೆ ಇವುಗಳೆಲ್ಲ ಹುಲ್ಲು ತಿನ್ನುವ ಪ್ರಾಣಿಗಳೆಂದು ಪರಿಗಣಿಸಲಾಗಿತ್ತು.ಆದರೆ ಈಗ ಕಾಲ ಬದಲಾಗಿದೆ.ಮನುಷ್ಯನ ಸ್ವಾರ್ಥಕ್ಕೆ ಕಾಡು ನಾಶವಾಗಿದ್ದು ಪ್ರಾಣಿಗಳಿಗೂ ಸರಿಯಾಗಿ ಆಹಾರ ಸಿಗುತ್ತಿಲ್ಲ.ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಂದು ವಿಡಿಯೋ ವೈರಲ್ ಆಗಿದೆ.
ಹುಲ್ಲು,ಎಲೆಗಳನ್ನು ತಿನ್ನಬೇಕಾದ ಜಿಂಕೆಯೊಂದು ಹಾವನ್ನು ಜಗಿಯುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ (IFS)ಯ ಅಧಿಕಾರಿ ಸುಸಂತ ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.ವಿಡಿಯೋವನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸೆರೆ ಹಿಡಿದಿದ್ದು, ಅದನ್ನು ನಂದಾ ಅವರು ತಮ್ಮ ಟ್ವೀಟರ್ ಹ್ಯಾಂಡಲ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಾಡಿನ ಪ್ರದೇಶದ ರಸ್ತೆ ಸಮೀಪ ನಿಂತಿದ್ದ ಜಿಂಕೆಯೊಂದು ಹಾವನ್ನು ಜಗಿದು ತಿನ್ನುತ್ತಿದೆ.ಈ ವೇಳೆ ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.ಜಿಂಕೆ ಹಾವನ್ನು ತಿನ್ನುತ್ತಿದೆಯಾ ? ಎಂಬ ಅಚ್ಚರಿಯ ಉದ್ಘಾರ ವಿಡಿಯೋದಲ್ಲಿ ಸೆರೆಯಾಗಿದೆ.ವೈರಲ್ ಆದ ವಿಡಿಯೋದ ಜತೆಗೆ “ಕ್ಯಾಮರಾಗಳು ಕೂಡಾ ಈಗ ಪ್ರಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವು ನೀಡುತ್ತಿದೆ. ಹೌದು ಕೆಲವೊಮ್ಮ ಸಸ್ಯಹಾರಿ ಪ್ರಾಣಿಗಳು ಹಾವನ್ನು ತಿನ್ನುತ್ತವೆ” ಎಂಬ ಕ್ಯಾಪ್ಶನ್ ನೀಡಲಾಗಿದೆ.