ನ್ಯೂಸ್ ನಾಟೌಟ್ : ತನ್ನ ಪಾಡಿಗೆ ವಿಡಿಯೋ ವ್ಲಾಗ್ ಮಾಡುತ್ತಿದ್ದ ವಿದೇಶಿ ಯೂಟ್ಯೂಬರ್ಗೆ ಸ್ಥಳೀಯ ವ್ಯಾಪಾರಿಯೊರ್ವ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ ಸಂಡೇ ಬಜಾರ್ನಲ್ಲಿ ಇಂದು(ಜೂನ್ 12 ) ನಡೆದಿದೆ.
ಬೆಂಗಳೂರು ನಗರದ ಚಿಕ್ಕಪಟೇಟೆಯಲ್ಲಿ ವ್ಯಾಪ್ತಿಯಲ್ಲಿ ನಡೆಯುವ ಸಂಡೇಬಜಾರ್ನಲ್ಲಿ ಈ ಘಟನೆ ನಡೆದಿದ್ದು, ವಿದೇಶಿ ಯೂಟ್ಯೂಬರ್ ನೆದರ್ಲ್ಯಾಂಡ್ನ ಪೆಡ್ರೋ ಮೊಟಾ ಎಂಬವರ ಮೇಲೆ ವ್ಯಾಪಾರಿಯೋರ್ವ ಹಲ್ಲೆ ಯತ್ನ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಿಕ್ಕಪೇಟೆಯ ಸಂಡೇಬಜಾರ್ನಲ್ಲಿ ಪೆಡ್ರೋ ಮೊಟಾ ವಿಡಿಯೋ ಶೂಟಿಂಗ್ ಮಾಡುತ್ತ ಇಷ್ಟು ದೊಡ್ಡ ಮಾರುಕಟ್ಟೆಯಲ್ಲಿ ತಾನು ಏನಾದರೂ ಖರೀದಿ ಮಾಡಿಯೇ ತೀರುತ್ತೇನೆ ಎಂದು ಹೇಳುತ್ತಿರುವಾಗಲೆ ಸ್ಥಳೀಯ ವ್ಯಾಪಾರಿಯೋರ್ವ ಆತನ ಕೈ ಹಿಡಿದು ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಆಗ್ರಹಿಸಿದ್ದಾನೆ. ಆದರೆ ಆತನ ಮಾತು ಅರ್ಥವಾಗದ ವಿದೇಶಿ ಯೂಟ್ಯೂಬರ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನನ್ನು ಆ ವ್ಯಾಪಾರಿ ಅಟ್ಟಾಡಿಸಿ ಕಿರುಕುಳ ನೀಡುತ್ತಾನೆ.
ಈ ವಿಡಿಯೋ ಪೆಡ್ರೋ ಮೊಟಾ ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಅವರು ಅದನ್ನು ತಮ್ಮ ಚ್ಯಾನಲ್ಅಲ್ಲಿ ಅಪ್ಲೋಡ್ ಮಾಡಿದ್ದಾರೆ. ಚಿಕ್ಕಪೇಟೆಯಲ್ಲಿ ನಡೆದ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ತಕ್ಷಣ ಪ್ರಕರಣವನ್ನು ಸ್ಥಳೀಯರು ಡಿಸಿಪಿ ಗಮನಕ್ಕೆ ತಂದಿದ್ದಾರೆ. ಮಾಹಿತಿ ಪಡೆದ ಪಶ್ಚಿಮ ವಿಭಾಗದ ಪೊಲೀಸರು ವಿಡಿಯೋದಲ್ಲಿ ಕಿರುಕುಳ ನೀಡಿರುವ ನವಾಬ್ ಶರೀಫ್ ಹಯಾತ್ ಎಂಬ ಆರೋಪಿಯನ್ನು ಬಂಧಿಸಿದ್ದು Sumoto ಪ್ರಕಣ ದಾಖಲು ಮಾಡಿಕೊಂಡಿದ್ದಾರೆ.