ನ್ಯೂಸ್ ನಾಟೌಟ್: ಪ್ರವಾಸಿ ತಾಣಗಳಿಗೆ ಹೋದಾಗ ಅಥವಾ ನಮಗೆ ಗೊತ್ತಿರದ ಸ್ಥಳಗಳಿಗೆ ತೆರಳಿದಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲಲ್ಲ. ಹೌದು,ಇಲ್ಲೊಂದು ಕಡೆ ಶಾರ್ಕ್ ಈ ರೀತಿಯ ಒಂದು ಅನಾಹುತ ಮಾಡುತ್ತದೆಂದು ಯಾರೂ ಭಾವಿಸಿರಲಿಲ್ಲ.
ಈಜಿಪ್ಟ್ ನ ಹುರ್ಘಡ ನಗರ ಕೆಂಪು ಸಮುದ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಸ್ಕೂಬಾ ಡೈವಿಂಗ್ ಬಹಳ ಪ್ರಸಿದ್ಧ.ದಿನ ನಿತ್ಯ ನೂರಾರು ಜನ ಇಲ್ಲಿ ಬಂದು ಎಂಜಾಯ್ ಮಾಡುತ್ತಾರೆ.ಆದರೆ ಆ ದಿನ ಏನಾಯ್ತೋ ಗೊತ್ತಿಲ್ಲ. ಈ ಖ್ಯಾತ ಪ್ರವಾಸೀ ಕೇಂದ್ರದಲ್ಲಿ ದುರಂತವೊಂದು ಕೆಲವೇ ಸೆಕೆಂಡ್ಗಳಲ್ಲಿ ನಡೆದುಹೋಗಿದೆ. ಜನ ತತ್ತರಿಸಿ ಹೋಗಿದ್ದಾರೆ.ಆತ ರಷ್ಯಾದ 23 ವರ್ಷದ ಪ್ರವಾಸಿ ವ್ಲಾಡಿಮಿರ್ ಪೊಪೊವ್ ತಮ್ಮ ರೆಸಾರ್ಟ್ನಿಂದ ಹೊರಬಂದು ಈಜಲು ಸಮುದ್ರ ಪ್ರವೇಶಿಸಿದ್ದಾರೆ.
ಅದೇ ವೇಳೆ ಟೈಗರ್ ಶಾರ್ಕ್ ಈತನ ಮೇಲೆ ದಾಳಿ ನಡೆಸಿದೆ. ಕ್ಷಣ ಮಾತ್ರದಲ್ಲೇ ಯುವಕನನ್ನು ಕಚ್ಚಿ ಎಳೆದೊಯ್ದ ಘಟನೆ ನಡೆದಿದೆ. ಯುವಕ ಅಪ್ಪಾ ಅಪ್ಪಾ ಎಂದು ಎಷ್ಟೇ ಗೊಗರೆದರೂ ಅಪ್ಪ ಪೊಪೊವ್ ಏನು ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ.ತಂದೆಯ ಎದುರಲ್ಲೇ ಮಗ ತನ್ನ ಪ್ರಾಣವನ್ನು ಬಿಟ್ಟ.ಈಜಿಪ್ಟ್ ಅಧಿಕಾರಿಗಳು ಕೆಂಪು ಸಮುದ್ರದ 74 ಕಿ.ಮೀ. ಉದ್ದದವರೆಗಿನ ಕರಾವಳಿ ತೀರವನ್ನು ಭಾನುವಾರದವರೆಗೆ ಬಂದ್ ಮಾಡಿದ್ದಾರೆ. ಈಜಿಪ್ಟ್ ನ ಅಧಿಕಾರಿಗಳಿಂದ ಪ್ರವಾಸಿಗಳವರೆಗೆ ಆಘಾತಗೊಂಡಿರುವ ವಿಷಯವಿದು. ಸಾಮಾನ್ಯವಾಗಿ ಇಂತಹ ಘಟನೆಗಳು ಇಲ್ಲಿ ಸಂಭವಿಸಿದ್ದು ಕಡಿಮೆ ಎನ್ನುತ್ತಿದ್ದಾರೆ ಅಧಿಕಾರಿಗಳು.