ನ್ಯೂಸ್ ನಾಟೌಟ್ : ‘ದಿ ಕೇರಳ ಸ್ಟೋರಿ’ ಚಲನಚಿತ್ರದಿಂದ ಮುಸಲ್ಮಾನ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಮುಸಲ್ಮಾನ ಯುವಜನದಲಿತ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ ದಿ ಕೇರಳ ಸ್ಟೋರಿ’ ಸಿನಿಮಾದಿಂದ ಮುಸಲ್ಮಾನರಿಗೆ ಅವಮಾನ ಮಾಡುತ್ತಿದ್ದಾರೆ. ರಾಜ್ಯ ದಲ್ಲಿ ಯಾರೇ ತಪ್ಪು ಮಾಡಿದರೂ ಮುಸಲ್ಮಾನ ಧರ್ಮವನ್ನೆ ಮುಂಚೂಣಿಯಲ್ಲಿ ತರುತ್ತಿದ್ದಾರೆ. ಘಟನೆಗೆ ಉಪ್ಪು ಕಾರ ಹಾಕಿ ಸಿನಿಮಾ ಮಾಡಿ ಅನ್ಯಾಯ ಮಾಡುತ್ತಿದ್ದಾರೆ. ಕೇರಳದಿಂದ ಬಂದ ಮುಸ್ಲಿಂಮರು ಬೇರೆ ರಾಜ್ಯಕ್ಕೆ ಹೋದರೆ ಪಾಕಿಸ್ತಾನದಿಂದ ಭಯೋತ್ಪಾದನೆ ಮಾಡಲು ಎಂದು ಸುದ್ದಿ ಹರಡಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ.
ಮಾತು ಮುಂದುವರಿಸಿದ ಅವರು, ಮನುಷ್ಯನಲ್ಲಿ ಮಾನವೀಯತೆ ಎಂಬುದು ಇಲ್ಲ. ಮುಸ್ಲಿಂ ಯುವಕರು ಹಿಂದೂ ಯುವತಿ ಜೊತೆ ಮಾತನಾಡಿದರೆ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಆದರೆ ಬೇರೆ ಧರ್ಮದವರು ಮಾತನಾಡಿದರೂ , ಸ್ಪರ್ಶ ಮಾಡಿದರೂ ಯಾವುದೇ ಪ್ರಚಾರಗಳು ನಡೆಯುವುದಿಲ್ಲ. ಹಿಂದೂ -ಮುಸ್ಲಿಂ- ಕ್ರೈಸ್ತರು ಒಂದೇ . ಆದರೆ ಕೆಲವು ಕಿಡಿಗೇಡಿಗಳು ಧರ್ಮದ ಹೆಸರಿನಲ್ಲಿ ಧರ್ಮಗಳಲ್ಲಿ ಕಿಚ್ಚನ್ನು ಉಂಟು ಮಾಡುತ್ತಿದ್ದಾರೆ. ಧರ್ಮಕ್ಕಿಂತ ಮಾನವೀಯತೆ ಮುಖ್ಯ ಧರ್ಮದ ಬಗ್ಗೆ ಅಪಪ್ರಚಾರ ಮಾಡುವವರು ಸರ್ಕಾರದ ಕಣ್ಣಿಗೆ ಕಂಡರೂ ಕೆಂದ್ರ ಸರ್ಕಾರ ಕಣ್ಣಿಗೆ ಕಾಣುತ್ತಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ದಕ್ಷಿಣ ಕರ್ನಾಟಕ ಸಲಾಫಿ ಸುಳ್ಯ ಸಲೀಂ ಪೆರಂಗೋಡಿ, ಕರ್ನಾಟಕ ಮುಸ್ಲಿಂ ಜಮಾಹತ್ ಮೂಸ ಕುಂಞಿ, ದ .ಕ SSF ಕಾರ್ಯದರ್ಶಿ ಅಕ್ಸರ್ ಕರಾವಳಿ, ಆಲ್ ಇಂಡಿಯಾ ಕೇರಳ ಮುಸ್ಲಿಂ ಕಲ್ಚರ್ನ ಉಪಾಧ್ಯಕ್ಷ ಅಶ್ರಫ್ , ಯುವ ಉದ್ಯಮಿ ಸಿದ್ದೀಕ್ , ಸದಸ್ಯರು ಹನೀಫ್, ಹಮೀದ್ ಉಪಸ್ಥಿತರಿದ್ದರು.