ನ್ಯೂಸ್ ನಾಟೌಟ್ : ತೆಕ್ಕಿಲ್ ಪ್ರತಿಷ್ಠಾನ ಮಾದರಿ ಶಾಲೆ ಗೂನಡ್ಕ ನೂತನ ಅಲ್ -ಬಿರ್ ಇಸ್ಲಾಮಿಕ್ ಫ್ರೀ ಶಾಲೆಯ ಉದ್ಘಾಟನೆ ಇದೇ ಬರುವ ಆದಿತ್ಯವಾರ (ಜೂ 11 ಕ್ಕೆ ) ಉದ್ಘಾಟನಾ ಸಮಾರಂಭ ಆಗಲಿದೆ ಎಂದು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ಟಿ.ಎಂ ಶಹೀದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಶಾಲೆಯ ಬಗ್ಗೆ ಮಾತನಾಡಿದ ಅವರು ನೂತನವಾಗಿ ನಿರ್ಮಾಣಗೊಂಡ ಶಾಲೆಯ ಉದ್ಘಾಟನೆಯಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹೊಸ ವಿನ್ಯಾಸದಲ್ಲಿ ಈ ಶಾಲೆ ರೂಪುಗೊಂಡಿದೆ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಮನರಂಜನೆ ಹಾಗೂ ಸ್ಮಾರ್ಟ್ ಟಿ.ವಿ ಮೂಲಕ ಹೊಸ ಪಠನೆಯಿಂದ ಆಕರ್ಷಿತವಾಗಲಿದೆ .
ಈ ಶಾಲೆಯು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಲಿದ್ದು, ಇಲ್ಲಿ ಅರೆಬಿಕ್ , ಇಂಗ್ಲೀಷ್ ,ಕನ್ನಡ ಭಾಷೆಗಳಿಗೆ ಉತ್ತೇಜನ ನೀಡಲಿದೆ ಎಂದು ಹೇಳಿದರು. ಶಾಲೆಯ ನೂತನ ಅಧ್ಯಕ್ಷರಾದ ಉನೈಸ್ ಪೆರಾಜೆ ಮಾತನಾಡಿ “ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಿದ್ದು ಗೂನಡ್ಕದಲ್ಲಿ ಇದು ಪ್ರಥಮ ಬಾರಿಗೆ ಆಗಿದೆ ಎನ್ನುವುದು ವಿಶೇಷ.ಇಲ್ಲಿ 24 ಮಕ್ಕಳಿಗೆ ಮಾತ್ರ ದಾಖಲಾತಿಯಿರಲಿದೆ.ತರಗತಿಗಳಲ್ಲಿ ಪಠ್ಯ ಭೋಧನೆ ನೀಡಲು ಉನ್ನತ ಶಿಕ್ಷಕರ ನೇಮಕಗೊಳಿಸಲಿದೆ. ಮಕ್ಕಳು ಬರೀ ಪಠ್ಯ ಪುಸ್ತಕದ ಬಗ್ಗೆ ಕಲಿಯದೆ ,ಹೊಸ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಈ ಶಾಲೆ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತೆಕ್ಕಿಲ್ ಶಾಲೆಯ ಗೌರವಾಧ್ಯಕ್ಷ ಸಂಚಾಲಕ ತಾಜ್ ಮುಹಮ್ಮದ್ , ಸಜ್ಜನ ಪ್ರತಿಷ್ಠಾನದ ರಹೀಂ ಬೀಜದಕಟ್ಟೆ , ಸದಸ್ಯ ಸಾದಿಕ್ ಮಾಸ್ಟರ್ ,ಆಸಿಫ್ ಪನ್ನೆ , ಸಾದಿಕ್ ಮಸೂದ್ , ಅಶ್ರಫ್ ಗುಂಡಿ , ಮೊದಲಾದವರು ಉಪಸ್ಥಿತರಿದ್ದರು.