ನ್ಯೂಸ್ ನಾಟೌಟ್ : ಮೇಕಪ್ ಮಾಡಿದ ನಂತರ, ಮಗುವಿಗೆ ತನ್ನ ತಾಯಿಯನ್ನು ಗುರುತಿಸಲು ಸಾಧ್ಯವಾಗದೆ ಇದ್ದದ್ದು ವಿಚಿತ್ರ. ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ತಾಯಿಯ ಮುಖದ ಬದಲಾವಣೆ ನೋಡಿ ಮಗ ಅವಳ ಬಳಿ ಹೋಗಲು ನಿರಾಕರಿಸಿದ್ದಾನೆ. ಮಗುವಿನ ಈ ವರ್ತನೆ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋ ಹಲವು ಬಗೆಯ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಬ್ಯೂಟಿ ಪಾರ್ಲರ್ ನಲ್ಲಿ ಪುಟ್ಟ ಮಗುವೊಂದು ಗಲಾಟೆ ಮಾಡಿ ತಾಯಿಗಾಗಿ ಹುಡುಕಾಟ ನಡೆಸುತ್ತಿರುವುದನ್ನು ಕಾಣಬಹುದು. ಅವನ ತಾಯಿ ಮೇಕ್ಅಪ್ ಮಾಡಿಸಿಕೊಂಡಿದ್ದಾರೆ. ಆದರೆ ಅತಿಯಾದ ಮೇಕಪ್ ಆದ ಅಮ್ಮನನ್ನು ಈ ಮಗು ಗುರುತಿಲಿಲ್ಲ. ಬ್ಯೂಟಿ ಪಾರ್ಲರ್‌ನವರು ಇವರೇ ನಿಮ್ಮ ತಾಯಿ ಎಂದು ಹೇಳಿದರೂ, ಈ ಮಗು ಅದನ್ನು ನಂಬಲಿಲ್ಲ. ಮೇಕಪ್ ಮಾಡಿದ ನಂತರ ತಾಯಿಯನ್ನು ಗುರುತಿಸಲು ಮಗು ನಿರಾಕರಿಸುತ್ತಿದೆ. ಅವನು ತನ್ನ ತಾಯಿಯನ್ನು ಹುಡುಕಲು ಪ್ರಾರಂಭಿಸುತ್ತಾನೆ.
ಆ ಮಗುವಿಗೆ ನಿನ್ನ ತಾಯಿ ಮೇಕಪ್ ಮಾಡಿದ್ದಾಳೆ ಎಂದು ಪದೇ ಪದೇ ವಿವರಿಸಲಾಗುತ್ತದೆ. ತಾಯಿ ತನ್ನ ಮಗುವನ್ನು ಎತ್ತಿಕೊಂಡು ಮಡಿಲಲ್ಲಿ ಕೂರಿಸಿದರೂ ಬಾಲಕ ಜೋರಾಗಿ ಅಳಲು ಆರಂಭಿಸಿದ.
ಈ ವಿಡಿಯೋವನ್ನು @HasnaZarooriHai ಅವರ ಖಾತೆಯಲ್ಲಿ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜನರು ವಿಡಿಯೋವನ್ನು ನೋಡಿದ ತಕ್ಷಣ ಅದ್ಭುತ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವಿಡಿಯೋ ಮೂರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.