ಭುವನೇಶ್ವರ್: ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದ ಕೆಲವೇ ದಿನಗಳ ಅಂತರದಲ್ಲಿ ಎಂಜಿನ್ ರಹಿತ ಗೂಡ್ಸ್ ರೈಲ್ವೆ ಕೋಚ್ ಅಡಿಗೆ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ. ಬುಧವಾರ ಜಾಜ್ಪುರ-ಕಿಯೋಂಜಾರ್ ರಸ್ತೆ ನಿಲ್ದಾಣದ ಬಳಿ ಈ ಭಯಾನಕ ಘಟನೆ ನಡೆದಿದ್ದು, ನಾಲ್ವರು ಘಟನೆಯಲ್ಲಿ ಸಾವನಪ್ಪಿದ್ದಾರೆ. ಉಳಿದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರೈಲ್ವೆ ಗುತ್ತಿಗೆ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ ಕಾರ್ಮಿಕರು ಭಾರಿ ಮಳೆ ಮತ್ತು ಗಾಳಿಯ ಕಾರಣ ಎಂಜಿನ್ ರಹಿತ ರೈಲ್ವೆ ವ್ಯಾಗನ್ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಇದ್ದಕ್ಕಿದ್ದಂತೆ ರೈಲ್ವೆ ವ್ಯಾಗನ್ ಚಲಿಸಲು ಆರಂಭಿಸಿದೆ. ಈ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ನಾಲ್ಕು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲ್ವೆ ಕೋಚ್ ನಲ್ಲಿ ಮಳೆಗಾಲದ ನಿರ್ವಹಣೆಗೆ ಅಗತ್ಯ ವಸ್ತುಗಳನ್ನು ಇರಿಸಲಾಗಿತ್ತು ಎನ್ನಲಾಗಿದೆ.