ನ್ಯೂಸ್ ನಾಟೌಟ್ : ವಾಹನಗಳು ಉಗುಳುತ್ತಿರುವ ದಟ್ಟ ಹೊಗೆ ಕಲುಷಿತ ಗಾಳಿಯಿಂದಾಗಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ಮನೆಯ ಹೊರಗೆ ಮಾತ್ರವಲ್ಲ, ಮನೆಯ ಒಳಗಡೆನೂ ಕೂಡ ಶುದ್ಧಗಾಳಿ ಲಭ್ಯವಾಗುತ್ತಿಲ್ಲ. ಇಷ್ಟು ದಿನ ಹಳ್ಳಿಗಳು ಹಚ್ಚ ಹಸಿರಾಗಿತ್ತು. ಆದ್ರೀಗ ಅಭಿವೃದ್ಧಿ ಹೆಸರಿನಲ್ಲಿ ಹಳ್ಳಿಗಳಲ್ಲೂ ಹಸಿರು ಮಂಗಮಾಯವಾಗಿದೆ.
ನೀವು ಮನೆಯಲ್ಲೇ ಶುದ್ಧ ಗಾಳಿಯನ್ನು ಪಡೆದುಕೊಳ್ಳಬಹುದು. ಅದು ಹೇಗಂದ್ರೆ ಮನೆಯಲ್ಲಿ ಈ ಗಿಡಗಳನ್ನು ಬೆಳೆಸಿದ್ರೆ ಸಾಕು. ಮನೆಯವರೆಲ್ಲರೂ ಶುದ್ಧಗಾಳಿಯನ್ನು ಸೇವಿಸ್ಬಹುದು. ಈ ಗಿಡಗಳು ಅಶುದ್ಧ ಗಾಳಿಯನ್ನು ಶುದ್ಧಗೊಳಿಸುವ ಶಕ್ತಿಯನ್ನು ಹೊಂದಿದೆ.ನೀವು ಉಸಿರಾಡುವ ಗಾಳಿ ಆರೋಗ್ಯಕರವಾಗಿರಬೇಕೆಂದರೆ ಈ ಗಿಡಗಳನ್ನು ಮನೆಯಲ್ಲಿಯೇ ಬೆಳೆಯಿರಿ.
1. ಮನಿ ಪ್ಲಾಂಟ್: ಮನೆಯೊಳಗಡೆ ಗಾಳಿಯನ್ನು ಶುದ್ಧೀಕರಿಸಲು ಮನಿ ಪ್ಲಾನ್ ಉತ್ತಮ ಸಸ್ಯ. ಈ ಸಸ್ಯದ ಜನಪ್ರಿಯತೆಗೆ ಪ್ರಮುಖ ಕಾರಣವೆಂದರೆ ಅದರ ಹೆಸರು. ಎರಡನೇಯದ್ದು ಇದರ ನಿರ್ವಹಣೆ ತುಂಬಾನೇ ಸುಲಭ. ಎಲ್ಲಿದ್ರೂ ಕೂಡ ಕೂಡ ಮನಿ ಪ್ಲಾಂಟ್ ಬದುಕುತ್ತದೆ.
2. ಅರೆಕಾ ಪಾಮ್ ( Areca Palm ): ಗಾಳಿಯನ್ನು ಶುದ್ಧೀಕರಿಸುವ ಸಸ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಈ ಸಸ್ಯವು ನೋಡಲು ಸುಂದರವಾಗಿದ್ದು, ಉದ್ದವಾದ ಮತ್ತು ಸೊಂಪಾದ ಹಸಿರು ಎಲೆಗಳನ್ನು ಹೊಂದಿದೆ. ಮತ್ತು ಇದರ ಎಲೆಗಳು ದಟ್ಟವಾಗಿದೆ. ನೋಡಲು ಕೊಂಚ ತಾಳೆಗಿಡದಂತೆ ಇದ್ದು, ಸ್ವಲ್ಪ ಉದ್ದವಾಗಿ ಬೆಳೆಯುತ್ತದೆ.
3. ರಬ್ಬರ್ ಸಸ್ಯ :ನೋಡೋದಕ್ಕೆ ಕಪ್ಪು-ನೇರಳೆ ಬಣ್ಣದಲ್ಲಿದೆ. ಇದು ನೋಡೋದಕ್ಕೆ ತುಂಬಾನೇ ಸುಂದರವಾಗಿ ಕಾಣುತ್ತದೆ. ಗಾಳಿಯನ್ನು ಶುದ್ಧೀಕರಿಸೋದ್ರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
4. ಪೀಸ್ ಲಿಲ್ಲಿ (Peace Lily) ಪೀಸ್ ಲಿಲ್ಲಿ ನೋಡೋದಕ್ಕೆ ಸುಂದರವಾಗಿದೆ.ಇದೊಂದು ಬಿಳಿ ಬಣ್ಣದ ಹೂ ಬಿಡುವ ಸಸ್ಯ. ಇದು ನಾವು ವಾಸಿಸುವ ಜಾಗವನ್ನು ಉತ್ತಮವಾಗಿಸುತ್ತದೆ. ಮತ್ತು ಮನೆಯ ಒಳಗಿರುವ ವಿಷವನ್ನು ತೆಗೆದು ಹಾಕುತ್ತದೆ. ಪೀಸ್ ಲಿಲ್ಲಿ ಸಸ್ಯಕ್ಕೆ ಅತಿಯಾಗಿ ನೀರುಹಾಕುವುದಕ್ಕಿಂತ ಕಡಿಮೆ ನೀರುಹಾಕಿದರೆ ಉತ್ತಮ.
5. ಸ್ನೇಕ್ ಪ್ಲಾಂಟ್ : ಸ್ನೇಕ್ ಪ್ಲಾಂಟ್ ನೋಡೋದಕ್ಕೆ ತುಂಬಾನೇ ವಿಭಿನ್ನ. ಕಡಿಮೆ ಹಾಗೂ ಹೆಚ್ಚು ಬೆಳಕಿದ್ದರೂ ಈ ಸಸ್ಯ ಸರಾಗವಾಗಿ ಬೆಳೆಯುತ್ತದೆ. ಈ ಸಸ್ಯವು ನೀರಿಲ್ಲದೆ ವಾರಗಟ್ಟಲೆ ಬದುಕಬಲ್ಲದು. ಒಳಾಂಗಣ ಗಾಳಿಯನ್ನು ಶುದ್ಧೀಕರಿಸಲು ಸ್ನೇಕ್ ಪ್ಲಾಂಟ್ ಅತ್ಯುತ್ತಮ ಸಸ್ಯ.
6. ಚೈನೀಸ್ ಎವರ್ ಗ್ರೀನ್: ಹೆಸರೇ ಹೇಳುವಂತೆ ಇದು ನಿಜವಾಗಿಯೂ ನಿತ್ಯಹರಿದ್ವರ್ಣ ಸಸ್ಯ. ಇದು ಕಡಿಮೆ ನೀರಿನಲ್ಲಿಯೂ ಬೆಳೆಯುವ ಸಸ್ಯವಾಗಿದೆ. ಈ ಸಸ್ಯ ಗಾಳಿಯನ್ನು ಶುದ್ಧೀಕರಿಸಲು ಅತ್ಯತ್ತಮ ಸಸ್ಯ. ಅಷ್ಟೇ ಅಲ್ಲ, ಇದು ತನ್ನ ಸೌಂದರ್ಯದಿಂದಲೂ ಎಲ್ಲರ ಗಮನ ಸೆಳೆಯುತ್ತದೆ.
7. ಸ್ಪೈಡರ್ ಪ್ಲಾಂಟ್: ಸ್ಪೈಡರ್ ಪ್ಲಾಂಟ್ ಅನ್ನು ಬೆಳೆಸೋದು ತುಂಬಾನೇ ಸುಲಭ. ಇದು ತುಂಬಾ ವೇಗ ಮತ್ತು ಸೊಗಸಾಗಿ ಬೆಳೆಯುತ್ತದೆ. ಸಸ್ಯವು ಅತ್ಯಂತ ದಟ್ಟವಾದ ಮತ್ತು ತೆಳುವಾದ ಎಲೆಯ ಮಾದರಿಯನ್ನು ಹೊಂದಿದೆ. ಇದು ನೋಡೋದಕ್ಕೆ ಜೇಡದ ಮಾದರಿಯನ್ನು ಹೊಂದಿರೋದಿಂದ ಈ ರೀತಿ ಕರೆಯಲಾಗುತ್ತದೆ.