ನ್ಯೂಸ್ ನಾಟೌಟ್: ಕಾಂಗ್ರೆಸ್ ಘೋಷಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೂ ಟಿಕೆಟ್ ಪಡೆದುಕೊಳ್ಳಬೇಕಿದೆ. ಮಹಿಳೆಯರು ರಾಜ್ಯದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ, ಸರ್ಕಾರ ಕೆಲವು ಷರತ್ತುಗಳನ್ನು ಹಾಕಿದೆ.
ಬಸ್ ಸೇವೆ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುತ್ತದೆ. ರಾಜ್ಯದ ಒಳಗೆ ಮಾತ್ರ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇರುತ್ತದೆ. ಎಕ್ಸ್ಪ್ರೆಸ್ ಬಸ್ನಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ನಲ್ಲಿ ಅವಕಾಶ ಇದೆ. ಎಸಿ ಮತ್ತು ಐಷಾರಾಮಿ ಬಸ್ಗಳಲ್ಲಿ ಉಚಿತ ಪ್ರಯಾಣವಿಲ್ಲ. ರಾಜಹಂಸ ಬಸ್ನಲ್ಲಿಯೂ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ. ಅಂತಾರಾಜ್ಯ ಪ್ರಯಾಣಕ್ಕೆ ಉಚಿತ ಸೌಲಭ್ಯ ಇರುವುದಿಲ್ಲ. ಉಚಿತ ಪ್ರಯಾಣದ ವೇಳೆ ಮಹಿಳೆರಿಗೆ ಟಿಕೆಟ್ ಕೊಡುತ್ತಾರಾ? ಅಥವಾ ಯಾವುದಾದರೂ ದಾಖಲೆ ತೆಗೆದುಕೊಂಡು ಹೋಗಬೇಕಾ ಎಂಬ ಗೊಂದಲ ಮಹಿಳೆಯರಲ್ಲಿದೆ. ಆದರೆ, ಆ ಗೊಂದಲಕ್ಕೆ ಈಗ ತೆರೆಬಿದ್ದಿದೆ. ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಬಸ್ನಲ್ಲಿ ಟಿಕೆಟ್ ಪಡೆಯುವ ಗೋಜಿಲ್ಲ ಅಂತ ಮಹಿಳೆಯರು ಅಂದುಕೊಳ್ಳಬೇಡಿ. ಏಕೆಂದರೆ, ಕಂಡಕ್ಟರ್ ಮಹಿಳೆಯರಿಗೂ ಟಿಕೆಟ್ ಕೊಡುತ್ತಾರೆ.
ಟಿಕೆಟ್ ಮೇಲೆ “ಮಹಿಳಾ ಪ್ರಯಾಣಿಕರ ಉಚಿತ ಚೀಟಿ ಶಕ್ತಿ ಯೋಜನೆ” ಎಂದು ಬರೆದಿರುತ್ತಾರೆ ಮತ್ತು ಟಿಕೆಟ್ನಲ್ಲಿ ಯಾವುದೇ ಬೆಲೆ ನಮೂದಾಗುವುದಿಲ್ಲ. ಮಾಮೂಲಿಯಂತೆ ಕಂಡಕ್ಟರ್ ಬಳಿ ಟಿಕೆಟ್ ಪಡೆದುಕೊಳ್ಳಬೇಕು. ಆದರೆ, ಬದಲಾವಣೆ ಏನೆಂದರೆ, ಹಣ ಕೊಡುವಂತಿಲ್ಲ.