ನ್ಯೂಸ್ ನಾಟೌಟ್: ಅಪರೂಪದ ಪ್ರಾಣಿಗಳನ್ನು ಬಲು ಹತ್ತಿರದಿಂದ ನೋಡಿ ಸಂತೋಷ ಪಡಲು ಜಂಗಲ್ ಸಫಾರಿ ಹೋಗುತ್ತಾರೆ. ಅದರಲ್ಲಿ ಸಿಗುವ ಥ್ರಿಲ್ ಗೆ ಸಾಟಿಯಿಲ್ಲ. ಆದರೆ ಅದೇ ಪ್ರಾಣಿಯು ನಿಮಗೆ ತುಂಬಾ ಹತ್ತಿರವಾಗಿ ನಿಮ್ಮ ಮೇಲೆರಗಿದರೆ? ನಿಮ್ಮ ಸಫಾರಿಯ ಮಧ್ಯದಲ್ಲಿ ಅವು ನಿಮ್ಮನ್ನು ಹಿಂಬಾಲಿಸಿದರೆ ಹೇಗಿರಬಹುದು.
ಇಲ್ಲೊಂದು ವಿಡಿಯೋದಲ್ಲಿ ಸೆರೆಹಿಡಿಯಲಾದ ಒಂದು ಘಟನೆ ಈಗ ಬೆಳಕಿಗೆ ಬಂದಿದ್ದು, ಸಫಾರಿ ಸಮಯದಲ್ಲಿ ಟೂರಿಸ್ಟ್ ಬಸ್ ಅನ್ನು ಹಿಂಬಾಲಿಸುವ ಹುಲಿಗಳ ಗುಂಪು ಅದರ ಮೇಲೆ ದಾಳಿಗೆ ಪ್ರಯತ್ನಿಸುತ್ತವೆ, ಒಂದು ಹುಲಿಯಂತೂ ಬಸ್ ಮೇಲೆ ಹತ್ತಿಯೇ ಬಿಡುತ್ತದೆ, ಇದರಿಂದ ಪ್ರವಾಸಿಗರೆಲ್ಲ ಗಾಬರಿಗೊಳುತ್ತಾರೆ. ಎಷ್ಟೇ ರಕ್ಷಣಾ ಕವಚವಿದ್ದರೂ ಹುಲಿಯ ಶಕ್ತಿಗೆ ಪುಟ್ಟ ಪ್ರವಾಸಿ ಬಸ್ ಅನ್ನು ಮಗುಚಿ ಹಾಕುವ ಶಕ್ತಿ ಇರುತ್ತದೆ.
@Bellaasays2 ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡ ಕ್ಲಿಪ್ ಈ ಘಟನೆಯ ವಿಡಿಯೋ ಹರಿಬಿಟ್ಟಿದ್ದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಟ್ವಿಟರ್ ಬಳಕೆದಾರರು ಕೇವಲ ಎರಡು ದಿನಗಳ ಹಿಂದೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅಂದಿನಿಂದ ಇದು 81,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 2,500 ಕ್ಕೂ ಹೆಚ್ಚು ಲೈಕ್ ಗಳನ್ನು ಪಡೆದಿದೆ.