ನ್ಯೂಸ್ ನಾಟೌಟ್: ಜಾಗತಿಕ ಮಟ್ಟದಲ್ಲಿ ಹಕ್ಕಿಜ್ವರದ ಪ್ರಕರಣ ತೀವ್ರಗತಿಯಲ್ಲಿ ಉಲ್ಬಣಗೊಳ್ಳುತ್ತಿದ್ದು ದೇಶಗಳು ಕೋಳಿಗಳಿಗೆ ಲಸಿಕೆ ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಂತರಾಷ್ಟ್ರೀಯ ಆರೋಗ್ಯತಜ್ಞರು ಎಚ್ಚರಿಸಿದ್ದಾರೆ.
ಸಸ್ತನಿಗಳಲ್ಲಿ ( ಏವಿಯನ್ ಇನ್ಫ್ಲೂಯೆಂಜಾ) ಹಕ್ಕಿಜ್ವರದ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆದರೆ ಈ ಸೋಂಕು ಮನುಷ್ಯರಿಗೆ ಹರಡುವ ಅಪಾಯ ಕಡಿಮೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ‘1996 ರಲ್ಲಿ ಮೊದಲ ಬಾರಿಗೆ ಕಾಣಸಿಕೊಂಡಿದ್ದ ಈ ಸೋಂಕು 2021ರ ಮಧ್ಯಭಾಗದಲ್ಲಿ ಸಾಂಕ್ರಾಮಿಕವಾಗಿ ಹರಡಿತ್ತು. ಈಗ ಮತ್ತೆ ತನ್ನ ಶಕ್ತಿ ಹೆಚ್ಚಿಸಿಕೊಂಡು ಸಾಂಕ್ರಾಮಿಕ ರೋಗವಾಗಿ ಹರಡುತ್ತಿದೆ ಎನ್ನುತ್ತಿದ್ದಾರೆ ಆರೋಗ್ಯ ತಜ್ಞರು.
ಆದರೆ ಮಾನವರಿಗೆ ಅಪಾಯದ ಪ್ರಮಾಣ ಕಡಿಮೆಯಾಗಿದ್ದರೂ ಸೋಂಕು ತೀವ್ರಗತಿಯಲ್ಲಿ ಬದಲಾಗಿ ಮನುಷ್ಯನಿಗೆ ಬಾಧಿಸುವ ಸಾಧ್ಯತೆಗಳಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಸ್ತನಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈರಸ್ ಪತ್ತೆಯಾಗಿರುವುದು ಅತ್ಯಂತ ಗಮನಾರ್ಹವಾಗಿದೆ. ಕಳೆದ ವಾರ ಚಿಲಿಯಲ್ಲಿ ಸುಮಾರು 9 ಸಾವಿರ ಸಮುದ್ರ ಸಿಂಹಗಳು, ಪೆಂಗ್ವಿನ್ ಗಳು, ನೀರು ನಾಯಿಗಳು, ಡಾಲ್ಫಿನ್ ಗಳು, ಸಮುದ್ರ ಹಂದಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿವೆ ಎಂದು ವೆಬಿ ಹೇಳಿದ್ದಾರೆ.
ಹಕ್ಕಿಜ್ವರವನ್ನು ನಿಯಂತ್ರಿಸುವ ಮತ್ತು ಅದು ಮಾನವನಿಗೆ ಹರಡುವ ಅಪಾಯವನ್ನು ಕಡಿಮೆಗೊಳಿಸುವ ಸರಳ ವಿಧಾನವೆಂದರೆ ಹಕ್ಕಿಗಳಿಗೆ, ಕೋಳಿಗಳಿಗೆ ಲಸಿಕೆ ನೀಡಬೇಕಾಗಿದೆ ಎಂದು ತಜ್ಞರು ಭಾರತಕ್ಕೂ ಎಚ್ಚರಿಕೆ ನೀಡಿದ್ದಾರೆ. ಇಂತಹ ರೋಗದ ಸಮಯದಲ್ಲಿ ವ್ಯಾಪಾರ ಕುಸಿಯುವ ಭೀತಿ ಎದುರಾಗಿದ್ದು, ಈ ಹಿಂದೆಯೂ ಕೋಳಿ ವ್ಯಾಪಾರದಲ್ಲಿ ಸಾಂಕ್ರಾಮಿಕ ರೋಗದ ವೇಳೆ ಬೆಲೆ ಕುಸಿತ ಕಂಡಿತ್ತು.
- +91 73497 60202
- [email protected]
- November 2, 2024 5:06 PM