ನ್ಯೂಸ್ ನಾಟೌಟ್ : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಚುನಾವಣಾ ಪೂರ್ವ ನೀಡಿದ ಗ್ಯಾರಂಟಿಗಳಿಗೆ ಆಗಸ್ಟ್ ೧೫ರಂದು ಸಿ.ಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.ಅದರಲ್ಲೂ ಕರೆಂಟ್ ಬಿಲ್ ಕಟ್ಟುವ ಬಗ್ಗೆ ಜನರಿಗೆ ತೀರಾ ಕುತೂಹಲವಿತ್ತು.ಗ್ಯಾರಂಟಿ ಜಾರಿ ಮಾಡಿಲ್ಲಾಂದ್ರೆ ನಾವು ವಿದ್ಯುತ್ ಬಿಲ್ ಪಾವತಿಸಲ್ಲ ಎಂದು ಹೇಳಿದ್ರು.ಆದರೀಗ ಆ ಎಲ್ಲಾ ಗೊಂದಲಗಳಿಗೆ ಕಾಂಗ್ರೆಸ್ ಸರ್ಕಾರ ಫುಲ್ ಸ್ಟಾಪ್ ಹಾಕಿದೆ.ಈ ಮಧ್ಯೆ ಕೊಡಗಿನಲ್ಲಿರುವ ಗ್ರಾಮ ಪಂಚಾಯತ್ ವೊಂದು ಕರೆಂಟ್ ಬಿಲ್ ಪಾವತಿ ಮಾಡದೇ ಭಾರಿ ಸುದ್ದಿಗೆ ಕಾರಣವಾಗಿದೆ.ಎಷ್ಟೋ ಸಮಯಗಳಿಂದ ಕರೆಂಟ್ ಬಿಲ್ ಕಟ್ಟದೇ ಇದೀಗ ಬರೋಬ್ಬರಿ ೯.೯೧ ಲಕ್ಷ ರೂ.ವನ್ನು ಬಾಕಿ ಉಳಿಸಿಕೊಂಡು ಕತ್ತಲೆಯಲ್ಲಿಯೇ ದಿನದೂಡುತ್ತಿದೆ!.
ಹೌದು… ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ಬರೋಬ್ಬರಿ 9.91 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಮ ಪಂಚಾಯತ್. ಕಳೆದ ನಾಲ್ಕೈದು ತಿಂಗಳಿಂದ ವಿದ್ಯುತ್ ಬಿಲ್ಲನ್ನೇ ಪಾವತಿಸಿಲ್ಲ!. ಪರಿಣಾಮ ಚೆಸ್ಕಾಂ ಇಲಾಖೆಯವರು ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಂಚಾಯಿತಿ ಕಟ್ಟಡದ ಫ್ಯೂಜ್ ಅನ್ನೇ ಕಿತ್ತುಕೊಂಡು ಹೋಗಿದ್ದು,ಕತ್ತಲಲ್ಲಿ ದಿನದೂಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸ್ವತಃ ಪಿಡಿಒ ಕೂಡ ಏನಾದರೂ ಬರೆಯಬೇಕೆಂದರೂ ಟಾರ್ಚ್ ಹಿಡಿದೇ ಬರೆಯುವ ಪರಿಸ್ಥಿತಿ.
ಗ್ರಾಮ ಪಂಚಾಯತ್ ಅಂದ್ರೆ ಅಲ್ಲಿಗೆ ದಿನ ನಿತ್ಯ ನೂರಾರು ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲೆಂದೇ ಆಗಮಿಸುತ್ತಾರೆ.ಆದರೆ ಪಂಚಾಯತ್ ಮಾಡಿರುವ ತಪ್ಪಿಗೆ ಸಾರ್ಜನಿಕರು ಶಿಕ್ಷೆ ಅನುಭವಿಸುವಂತಾಗಿದೆ.ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಕೆಲಸಗಳಾಗದೇ ವಾಪಾಸ್ ಮನೆ ಕಡೆ ತೆರಳುತ್ತಿದ್ದಾರೆ.ಪಂಚಾಯತ್ ಈ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು,ಪಂಚಾಯತ್ ಗೆ ಬಂದು ಕರೆಂಟ್ ಇಲ್ಲದೇ ಒದ್ದಾಡುತ್ತಿರುವ ಜನರೀಗ ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಬಗ್ಗೆ ಪಿಡಿಓ ಅವರನ್ನು ಪ್ರಶ್ನೆ ಮಾಡಿದ್ರೆ” ನಾನು ಜನವರಿ ತಿಂಗಳಿನಲ್ಲಿ ಈ ಪಂಚಾಯಿತಿಗೆ ವರ್ಗಾವಣೆಯಾಗಿ ಬಂದಿದ್ದೇನೆ. ಆ ಸಮಯಕ್ಕೆ 7 ಲಕ್ಷಕ್ಕೂ ಹೆಚ್ಚು ವಿದ್ಯುತ್ ಬಿಲ್ಲನ್ನು ಬಾಕಿ ಉಳಿಸಲಾಗಿತ್ತು. ಸಂಗ್ರಹವಾಗುತ್ತಿರುವ ತೆರಿಗೆ ಹಣದಲ್ಲಿ ಎಷ್ಟು ಸಾಧ್ಯವೋ ಅಷ್ಟು ವಿದ್ಯುತ್ ಬಿಲ್ಲನ್ನು ಪಾವತಿಸುತ್ತಿದ್ದೇವೆ ಎಂದು ಉತ್ತರಿಸುತ್ತಾರೆ. ಇನ್ನೂ ಈ ಕುರಿತು ಈ ಕ್ಷೇತ್ರದ ಶಾಸಕ ಮಂಥರ್ ಗೌಡ ಅವರನ್ನು ಕೇಳಿದ್ರೆ ಈ ಬಗ್ಗೆ ಈಗಾಗಲೇ ತಮ್ಮ ಗಮನಕ್ಕೆ ಬಂದಿದೆ. ಸಿಒ ಹಾಗೂ ವಿದ್ಯುತ್ ಇಲಾಖೆ ಅಧಿಕಾರಿಗಳ ಜತೆ ಮಾತಾನಾಡಿ ತಾತ್ಕಾಲಿಕ ವ್ಯವಸ್ಥೆ ಮಾಡಿ ಮಾಡುತ್ತೇವೆ. ಕರೆಂಟ್ ಕನೆಕ್ಷನ್ ಮಾಡಿಸುವ ಮೂಲಕ ಸಾರ್ವಜನಿಕರಿಗೆ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸುತ್ತೇವೆ ಎಂದಿದ್ದಾರೆ.