ನ್ಯೂಸ್ ನಾಟೌಟ್: ‘ಗ್ಯಾರಂ ಟಿಗಳ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಆದಾಯ ಮೂಲವನ್ನು ಎಲ್ಲಿಂದ ಕಂಡುಕೊಂ ಡಿದೆ ಎಂಬುದನ್ನು ಸ್ಪಷ್ಟಪಡಿಸಬೇ ಕು. ಈ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇ ಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದರು.
ಈ ಯೋ ಜನೆಗಳ ಅನುಷ್ಠಾನವನ್ನು ನಾವು ಸ್ವಾಗತಿಸುತ್ತೇ ವೆ. ಆದರೆ, ಇವುಗಳ ಜಾರಿಯ ಬಗ್ಗೆ ಸರಿಯಾದ ಮಾಹಿತಿ ನೀಡಲಿ’ ಎಂದು ಒತ್ತಾಯಿಸಿದರು. ‘ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಉಚಿತ ಕೊಡುವುದಾಗಿ ಹೇ ಳಿದ್ದೀರಿ. ಕೇಂ ದ್ರ ಸರ್ಕಾರ ಈಗಾಗಲೇ 5 ಕೆ.ಜಿ ಅಕ್ಕಿ ನೀಡುತ್ತಿದೆ. ಇದರ ಜೊತೆಗೆ ಹೆಚ್ಚುವರಿಯಾಗಿ 10 ಕೆ.ಜಿ. ಅಕ್ಕಿ ನೀಡುತ್ತೀ ರಾ? ಹಿಂದೆ ಬಿಜೆಪಿ ಸರ್ಕಾರ 2 ಕೆ.ಜಿ. ಹೆಚ್ಚುವರಿ ಧಾನ್ಯ ಕೊಡುತ್ತಿತ್ತು. ಅದನ್ನು ನಿಮ್ಮ ಸರ್ಕಾರ ಮುಂ ದುವರಿಸಲಿದೆಯೇ ’ ಎಂ ದು ಪ್ರಶ್ನಿಸಿದರು. ಮುಂ ಬರುವ ಲೋಕಸಭಾ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂ ಡು ಇಂಥಯೋ ಜನೆ ನೀ ಡಿದರೆ ಪಾಕಿಸ್ತಾನ, ಶ್ರೀ ಲಂಕಾದಂತೆ ಕರ್ನಾಟಕ ಕೂಡ ಆರ್ಥಿಕ ಹಿಂಜರಿತ ಎದುರಿಸುವ ಸಾಧ್ಯತೆ ಇದೆ ಎಂ ದು ಅವರು ಹೇಳಿದರು.