ನ್ಯೂಸ್ ನಾಟೌಟ್: ಕೋ ರಮಂ ಡಲ್ ಎಕ್ಸ್ ಪ್ರೆಸ್ , ಬೆಂ ಗಳೂರು–ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಒಡಿಶಾದ ಬಾಲಸೋರ್ ನಲ್ಲಿ ಶುಕ್ರವಾರ ರಾತ್ರಿ ಭೀಕರ ದುರಂತ ಸಂಭವಿಸಿದೆ. ಅವಘಡದಲ್ಲಿ ಕನಿಷ್ಠ 233 ಮಂದಿ ಮೃತಪಟ್ಟು, ಸುಮಾರು 900ಕ್ಕೂ ಹೆಚ್ಚು ಮಂ ದಿ ಗಾಯಗೊಂಡಿದ್ದಾರೆ.
ಬಹನಾಗಾ ಬಜಾರ್ ನಿಲ್ದಾಣದ ಸಮೀ ಪ ರಾತ್ರಿ 7.20ರ ಸುಮಾರಿಗೆ ಈ ಭೀ ಕರ ಅವಘಡ ಸಂಭವಿಸಿದೆ. ‘ಒಡಿಶಾದ ಈ ಮಹಾ ರೈಲು ದುರಂ ತಕ್ಕೆ ರೈಲು ಹಳಿಗಳಲ್ಲಿನ ದೋ ಷವೇ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ‘ಹಳಿಗಳು ದೋ ಷಯುಕ್ತವಾಗಿದ್ದವೆಂ ದು ಶಂಕಿಸಲಾಗಿದೆ. ಆದರೆ, ತನಿಖೆಯ ನಂ ತರ ದುರಂ ತಕ್ಕೆ ನಿಖರ ಕಾರಣವೇನೆಂ ದು ತಿಳಿಯಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ರೈ ಲ್ವೆ ಸುರಕ್ಷತಾ ಆಯುಕ್ತರು ತನಿಖೆ ಕೈಗೊಳ್ಳಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೆಂಗಳೂರಿನಿಂದ ಹೊರಟ್ಟಿದ್ದ ಹೌರಾ ಎಕ್ಸ್ ಪ್ರೆಸ್
ಒಡಿಶಾದ ಬಹನಾಗಾ ರೈಲು ನಿಲ್ದಾಣ ಬಳಿ ರೈಲುಗಳು ಅಪಘಾತ ಸಂಭವಿಸಿದ್ದು, ಬೆಂ ಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ . ವಿಶ್ವೇ ಶ್ವರಯ್ಯ ಟರ್ಮಿ ನಲ್ ನಿಂದ ಹೌರಾಕ್ಕೆ ಹೊರಟಿದ್ದ ರೈಲಿನಲ್ಲಿದ್ದ ಹಲವು ಪ್ರಯಾಣಿಕರು ಮೃತಪಟ್ಟಿದ್ದಾರೆ. ರಾಜ್ಯದವರೂ ಇರುವ ಶಂಕೆಯಿದೆ. ಬೈಯಪ್ಪನಹಳ್ಳಿಯಿಂದ ಹೊರಟಿದ್ದ ರೈಲು, ಕೆ.ಆರ್. ಪುರ ಹಾಗೂ ಬಂಗಾರಪೇಟೆ ನಿಲ್ದಾಣ ಮಾರ್ಗ ವಾಗಿ ಆಂಧ್ರಪ್ರದೇ ಶ ಪ್ರವೇಶಿಸಿ ಹೌರಾದತ್ತ ಹೊರಟಿತ್ತು. ಇದೇ ರೈಲಿನಲ್ಲಿ ಕರ್ನಾ ಟಕದ ಪ್ರಯಾಣಿಕರಿದ್ದರು. ಜೊತೆಗೆ, ಬೆಂ ಗಳೂರಿನಲ್ಲಿ ನೆಲೆಸಿದ್ದ ಉತ್ತರ ಪ್ರದೇ ಶ ಕಾರ್ಮಿಕರೂ ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಇದೆ. ಆದರೆ,ಯಾರೊಬ್ಬರ ಹೆಸರು ಹಾಗೂ ವಿಳಾಸ ಸದ್ಯಕ್ಕೆ ಗೊತ್ತಾಗಿಲ್ಲ. ಪ್ರಯಾಣಿಕರ ಬಗ್ಗೆ ಮಾಹಿತಿ ಇದ್ದವರು ಅಥವಾ ಕುಟುಂಬದ ಸದಸ್ಯರು ಸಹಾಯವಾಣಿಗೆ ಕರೆಮಾಡಬಹುದು ಎಂದು ರೈ ಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಹಾಯವಾಣಿ ಸಂ ಖ್ಯೆ: 080–22942666, 080–22871291 (ಬೆಂಗಳೂರು ರೈ ಲ್ವೆ ನಿಯಂ ತ್ರಣ ಕೊಠಡಿ) ಹಾಗೂ ಒಡಿಶಾದ 08249591559, 67822262286.