ನ್ಯೂಸ್ ನಾಟೌಟ್: ಬಸ್ ನಲ್ಲಿ ಓಡಾಡುವ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ಉಚಿತ ಬಸ್ ಪ್ರಯಾಣದ ಭಾಗ್ಯವನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕದ ಮಹಿಳೆಯರಂತೂ ಫುಲ್ ಖುಷಿ ಪಟ್ಟಿದ್ದಾರೆ. ಈ ನಡುವೆಯೇ ಹಲವಾರು ಮಹಿಳೆಯರಿಗೆ ಈ ಬಗ್ಗೆ ಗೊಂದಲ ಎದ್ದಿದೆ.
ಹೌದು, ಯಾವ ರೀತಿಯಲ್ಲಿ ಕರ್ನಾಟಕ ಸರಕಾರ ಮಹಿಳೆಯರನ್ನು ರಾಜ್ಯದ ಮಹಿಳೆಯರೆಂದು ಗುರುತಿಸುತ್ತೆ. ಕರ್ನಾಟಕದ ಮಹಿಳೆಯರಿಗೆ ಮಾತ್ರನಾ ಅಥವಾ ಇತರೆ ರಾಜ್ಯದ ಮಹಿಳೆಯರಿಗೂ ಉಚಿತ ಪ್ರಯಾಣದ ಭಾಗ್ಯ ಲಭಿಸುತ್ತದೋ? ಕರ್ನಾಟಕದ ಮಹಿಳೆಯರಿಗೆ ಮಾತ್ರ ಆದರೆ ಅವರನ್ನು ಹೇಗೆ ಗುರುತಿಸುತ್ತೀರಿ? ಎಲ್ಲ ರಾಜ್ಯಗಳ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ ಇದೆಯಾ? ಪಾಸ್ ಏನಾದರೂ ಕೊಡುತ್ತೀರೋ? ಹದಿನೆಂಟು ವರ್ಷ ಮೀರಿದ ವಿದ್ಯಾರ್ಥಿನಿಯರು ಮಹಿಳೆಯರ ಸಾಲಿಗೆ ಸೇರುತ್ತಾರೆ. ಅವರಿಗೆ ವಿದ್ಯಾರ್ಥಿ ಪಾಸ್ ಇರುತ್ತದಾ? ಅಂತಹವರಿಗೆ ವಿದ್ಯಾರ್ಥಿ ಪಾಸ್ ನೀಡಲ್ವ? ಹೀಗೆ ಸಾಲು ..ಸಾಲು ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.